ಹೈದರಾಬಾದ್ ಚಾಂಪಿಯನ್ಸ್

0
221

ಸ್ಪೋರ್ಟ್ಸ್ ಪ್ರತಿನಿಧಿ ವರದಿ
2016 ನೇ ಸಾಲಿನ ಐಪಿಎಲ್ ಟ್ರೋಪಿಯಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಸನ್’ರೈಸರ್ಸ್ ಹೈದರಾಬಾದ್ ತಂಡ ಚೊಚ್ಚಲ ಬಾರಿಗೆ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರೋಚಕ ಜಯ ದಾಖಲಿಸಿದೆ.
 
 
ಬೆಂಗಳೂರು ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸನ್’ರೈಸರ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡು 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು.
 
 
ಬೌಲಿಂಗ್’ನಲ್ಲೂ 2 ವಿಕೆಟ್ ಪಡೆದು ಆಲ್ರೌಂಡ್ ಆಟ ಪ್ರದರ್ಶಿಸಿದ ಹೈದರಾಬಾದ್ ತಂಡದ ಬೆನ್ ಕಟಿಂಗ್ಸ್ ಪಂದ್ಯ ಪುರುಶೋತ್ತಮ ಪ್ರಶಸ್ತಿಗೆ ಭಾಜನರಾದರು. ಟೂರ್ನಿಯುದ್ದಕ್ಕೂ ಅದ್ಬುತ ಫಾರ್ಮ್’ನಲ್ಲಿ 973 ರನ್’ ಗಳಿಸಿದ ವಿರಾಟ್ ಆರೆಂಜ್ ಕ್ಯಾಪ್ ಪಡೆದುಕೊಂಡರು. ಹಾಗೆಯೇ 23 ವಿಕೆಟ್ ಪಡೆದ ಸನ್’ರೈಸರ್ಸ್ ತಂಡದ ಭೂವನೇಶ್ವರ್ ಕುಮಾರ್ ಪರ್ಪಲ್ ಕ್ಯಾಪ್ ಪಡೆದುಕೊಂಡರು.
 
 
 
ಫೈನಲ್ ಪಂದ್ಯದಲ್ಲಿ ಹೈದ್ರಾಬಾದ್ ಪಂದ್ಯದಲ್ಲಿ ನವಾಬರು ಮಿಂಚಿದ್ದು. ಪ್ರಶಸ್ತಿ ಗೆಲ್ಲುವ ರಾಯಲ್ ಚಾಲೆಂಜರ್ಸ್ ಕನಸು ಭಗ್ನವಾಗಿದೆ. ಆರ್ ಸಿಬಿ ಸೋಲಿನಿಂದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ.
 
 
ಆರ್ ಸಿಬಿ ಪರ ಕ್ರಿಸ್ ಗೇಲ್ 76, ವಿರಾಟ್ ಕೊಹ್ಲಿ 54 , ಅಬ್ರಹಾಂ ವಿಲಿಯರ್ಸ್ 5, ಕೆ ಎಲ್ ರಾಹುಲ್ 11, ವಾಟ್ಸನ್ 11, ಸ್ಟುವರ್ಟ್ ಬಿನ್ನಿ, ಜೋರ್ಡನ್ 3, ಸಚಿನ್ ಬೇಬಿ, ಇಕ್ಬಾಲ್ ಅಬ್ದುಲ್ಲಾ 4 ರನ್ ಗಳಿಸಿದ್ದಾರೆ. ಎಸ್ ಆರ್ ಹೆಚ್ ಪರ ಕಟ್ಟಿಂಗ್ 2, ಬರಿಂದರ್ 1, ವಿಫುಲ್ ಶರ್ಮಾ 1, ಮುಸ್ತಫಿಜುರ್ 1 ವಿಕೆಟ್ ಪಡೆದಿದ್ದಾರೆ.
 
 
 
ಹೈದರಾಬಾದ್ ಪರ ಡೇವಿಡ್ ವಾರ್ನರ್ 69, ಶಿಖರ್ ಧವನ್ 28, ಮೊಯಿಸೆಸ್ ಹೆನ್ರಿಕ್ಸ್ 4, ಯುವರಾಜ ಸಿಂಗ್ 38, ದೀಪಕ್ ಹೂಡಾ 3, ನಮನ್ ಓಝಾ 7, ವಿಫುಲ್ ಶರ್ಮಾ 5, ಬೆನ್ ಕಟ್ಟಿಂಗ್ ಔಟಾಗದೆ 39, ಭುವನೇಶ್ವರ ಕುಮಾರ್ ಔಟಾಗದೆ 1 ರನ್ ಗಳಿಸಿದ್ದಾರೆ. ಜೋರ್ಡನ್ 3, ಅರವಿಂದ್ 2, ಚಾಹಲ್ ಗೆ 1ವಿಕೆಟ್ ಪಡೆದಿದ್ದಾರೆ.

LEAVE A REPLY

Please enter your comment!
Please enter your name here