ಹೈಟಿಗೆ 'ಮ್ಯಾಥ್ಯೂ'ಮರ್ಮಾಘಾತ

0
386

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
5 ದಶಕಗಳಲ್ಲಿ ಕಂಡುಕೇಳರಿಯದ ಚಂಡಮಾರುತ ಬಂದಿದೆ ಅಮೆರಿಕಾದಲ್ಲಿ… ಮ್ಯಾಥ್ಯೂ ಚಂಡಮಾರುತಕ್ಕೆ ಹೈಟಿ ಸಂಪೂರ್ಣ ನಾಶವಾಗಿದೆ. ಮನೆಗಳು, ಸೇತುವೆಗಳು ಚಂಡಮಾರುತಕ್ಕೆ ಛಿದ್ರಛದ್ರವಾಗಿದೆ ಹೋಗಿದೆ.
 
 
ಕೆಲ ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆ, ಚಂಡಮಾರುತ ಬೀಸುತ್ತಿದ್ದು ಇದರಲ್ಲಿ ಕನಿಷ್ಠ 800ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.ಭೀಕರ ಚಂಡಮಾರುತಕ್ಕೆ ನಿರಾಶ್ರಿತರಾದ ಲಕ್ಷಾಂತರ ಜರನ್ನು ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಲಾಗಿದೆ.
 
ಮ್ಯಾಥ್ಯೂ ರಭಸಕ್ಕೆ ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿವೆ. ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತೊಂಡು ಜನರು ಮತ್ತಷ್ಟು ತೊಂದರೆ ಎದುರಿಸುತ್ತಿದ್ದಾರೆ. ಅಪಾಯಕಾರಿ ಪ್ರದೇಶಗಳಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲು ಅಮೆರಿಕ ವಿಪತ್ತು ನಿರ್ವಹಣಾ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
 
 
ಮ್ಯಾಥ್ಯೂ ಚಂಡಮಾರುತ ಹಿನ್ನಲೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಆಂತರಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ಈ ಭಾಗದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸಮರೋಪಾದಿ ರಕ್ಷಣಾ ಕಾರ್ಯಾಚರಣೆಗೆ ಆದೇಶಿಸಲಾಗಿದ್ದು, ಕಾರ್ಯಾಚರಣೆಯಲ್ಲಿ ಅಮೆರಿಕದ ನುರಿತ ಸೇನಾಪಡೆಗಳು ಕೂಡ ಕೈ ಜೋಡಿಸಿವೆ.

LEAVE A REPLY

Please enter your comment!
Please enter your name here