ಹೈಅಲರ್ಟ್ ಸಮಾಲೋಚನೆ

0
442

ರಾಷ್ಟ್ರೀಯ ಪ್ರತಿನಿಧಿ ವರದಿ
ಪಾಕಿಸ್ತಾನದ ನೆಲೆಗಳ ಮೇಲೆ ಸೇನೆ ಸೀಮಿತ ದಾಳಿ ಹಿನ್ನೆಲೆಯಲ್ಲಿ ಇಂದು ಹೈಅಲರ್ಟ್ ಸಮಾಲೋಚನೆ ಸಭೆ ನಡೆದಿದೆ. ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಕೇಂದ್ರ ಅಂತರಿಕಾ ಭದ್ರತಾ ಸಲಹಾ ಸಮಿತಿ ಸಭೆ ನಡೆದಿದೆ. ರಾಷ್ಟ್ರೀಯ ತನಿಖಾ ದಳ, ಗುಪ್ತಚರ ಇಲಾಖೆ, ರಾಷ್ಟ್ರೀಯ ಮುಖ್ಯಸ‍್ಥರ ಜೊತೆ ಚರ್ಚೆ ನಡೆದಿದೆ.
 
 
ಸೆರೆಸಿಕ್ಕ ಯೋಧನ ರಕ್ಷಣೆಗೆ ಕ್ರಮ
ಪಾಕಿಸ್ತಾನ ಸೇನೆಯಿಂದ ವಶದಲ್ಲಿರುವ ಭಾರತೀಯ ಯೋಧನ ರಿಲೀಸ್ ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಈಗಾಗಲೇ ಪಾಕ್ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗಿದೆ. ಯೋಧನ ಬಿಡುಗಡೆ ಸಂಬಂಧ ಎಲ್ಲಾ ಕ್ರಮ ಕೈಗೊಂಡಿದ್ದೇವೆ.
ಪಾಕ್ ವಶದಲ್ಲಿರುವ ಯೋಧ ಬಹಳ ಹಿಂದೆಯೇ ಸೆರೆ ಸಿಕ್ಕಿದ್ದ. ಗಡಿ ಉಲ್ಲಂಘನೆ ಆರೋಪದಡಿ ಪಾಕ್ ಸೇನೆ ಭಾರತೀಯ ಯೋಧನನ್ನು ವಶಕ್ಕೆ ಪಡೆದಿದೆ. ಆದರೆ ಪಾಕಿಸ್ತಾನ ಭಾರತೀಯ ಯೋದನನ್ನು ನಿನ್ನೆ ಬಂಧಿಸಿದ್ದೇವೆ ಎನ್ನುತ್ತಿದೆ. ಆದರೆ ಇದು ಸುಳ್ಳು ಎಂದು ಭಾರತ ಸರ್ಕಾರ ಸ್ಪಷ್ಟನೆ ನೀಡಿದೆ.
 
 
ಪಾಕ್ ಡ್ರೋಣ್ ಬಳಕೆ
ಪಾಕಿಸ್ತಾನ ಗಡಿಯಲ್ಲಿ ಡ್ರೋಣ್ ಮೂಲಕ ಸೇನೆಯ ಚಲನವಲನಗಳನ್ನು ಗಮನಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಭಾರತ ಪಾಕ್ ಗಡಿಯಲ್ಲಿ ತೀವ್ರ ಕಟ್ಟಚ್ಚರ ವಹಿಸಿದೆ. ಪರಿಸ್ಥಿತಿಗೆ ಅನುಗುಣವಾಗಿ ಪ್ರತಿಕ್ರಿಯಿಸಲು ಭಾರತ ಸನ್ನದ್ಧವಾಗಿದೆ. ರಾಡಾರ್, ಉಪಗ್ರಹಗಳನ್ನು ಬಳಸಿಕೊಂಡು ಪಾಕಿಸ್ತಾನದ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ. ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಪಾಕಿಸ್ತಾನದ ಡ್ರೋಣ್ ಹಾರಾಡುತ್ತಿದೆ.
 
 
ಭಾರತ-ಪಾಕ್ ಗಡಿ ಖಾಲಿ-ಖಾಲಿ
ಪಾಕಿಸ್ತಾದ ನೆಲೆಗಳಲ್ಲಿ ಸೇನೆ ಸೀಮಿತ ದಾಳಿ ಹಿನ್ನೆಲೆಯಲ್ಲಿ ಗಡಿಯಲ್ಲಿರು ಗ್ರಾಮಗಳನ್ನು ಆಬರತೀಯ ಸೇನೆ ತೆರವುಗೊಳಿಸುತ್ತಿದೆ. ಗ್ರಾಮಸ್ಥರು ದೇವರಿಗೆ ನಮಿಸಿ ಊರು ಖಾಲಿ ಮಾಡುತ್ತಿದ್ದಾರೆ. ನಿರಾಶ್ರಿತರಿಗಾಗಿ ಪಠಾಣ್ ಕೋಟ್ ನಲ್ಲಿ ಸಂತ್ರಸ್ತರ ಶಿಬಿರವನ್ನು ಪ್ರಾರಂಭಿಸಲಾಗಿದೆ.

LEAVE A REPLY

Please enter your comment!
Please enter your name here