ವಾರ್ತೆ

ಹೆಸರು – ಪಾಲಕ್ ಮಿಕ್ಸ್ ಪಲ್ಯ

ವಾರ್ತೆ ರೆಸಿಪಿ
ಸಾಮಗ್ರಿಗಳು:
ಮೊಳಕೆ ಬರಿಸಿದ ಹೆಸರು ಕಾಳು 1 ಲೋಟ, ಪಾಲಕ್ ಸೊಪ್ಪು 1 ಕಟ್ಟು ತುರಿದ ಶುಂಠಿ 1 ಚೂರು, ಎಣ್ಣೆ ಅರ್ಧ ಸೌಟು, ಜೀರಿಗೆ 1 ಚಮಚ, ಈರುಳ್ಳಿ 1, ಕೊತ್ತಂಬರಿ ಹುಡಿ 1 ಚಮಚ, ಮೆಣಸಿನ ಹುಡಿ 1 ಚಮಚ, ಗರಂ ಮಸಾಲೆ 1/2 ಚಮಚ, ಅರಶಿನ 1/2 ಚಮಚ, ನಿಂಬೆ ರಸ ಅರ್ಧ ಹೋಳು, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.
 
 
ಮಾಡುವ ವಿಧಾನ: 
ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು, ಚಿಕ್ಕದಾಗಿ ಹೆಚ್ಚಿ, ಮೊಳಕೆ ಬರಿಸಿದ ಹೆಸರು ಕಾಳನ್ನು ಹಾಕಿ ಅದಕ್ಕೆ ತುರಿದ ಶುಂಠಿ ಸೇರಿಸಿ ಕುಕ್ಕರ್ನಲ್ಲಿ ಒಂದು ವಿಷಲ್ ಬರುವವರೆಗೆ ಬೇಯಿಸಿ. ಕಾದ ಎಣ್ಣೆಗೆ ಜೀರಿಗೆ ಹಾಕಿ, ಈರುಳ್ಳಿ ಹೆಚ್ಚಿ ಹಾಕಿ ಬಾಡಿಸಿ, ಕೊತ್ತಂಬರಿ ಹುಡಿ, ಮೆಣಸಿನ ಹುಡಿ, ಗರಂ ಮಸಾಲೆ, ಅರಶಿನ, ಉಪ್ಪು ಹಾಕಿ ಕಲಡಿಸಿರಿ. ನಂತರ ಬೇಯಿಸಿದ ಪದಾರ್ಥಗಳನ್ನು ಹಾಕಿ ಕುದಿಸಿ, ಇಳಿಸಿ. ನಿಂಬೆರಸ, ಕೊತ್ತಂಬರಿ ಸೊಪ್ಪು ಹಾಕಬೇಕು.      -ವನಿತಾ, ಕುಂಟಲ್ಪಾಡಿ

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here