ಹೆಲಿಕಾಪ್ಟರ್ ಪತನಗೊಳಿಸುವ ವಿಡಿಯೋ ಬಿಡುಗಡೆ

0
310

 
ವರದಿ: ಲೇಖಾ
ರಷ್ಯಾದ ಹೆಲಿಕಾಪ್ಟರ್ ಒಂದನ್ನು ಹೊಡೆದುರುಳಿಸಿದ ವಿಡಿಯೋ ಒಂದನ್ನು ಐಸಿಸ್ ಉಗ್ರ ಸಂಘಟನೆ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಕಾಣಿಸುವ ದೃಶ್ಯ ದಿಗ್ಭ್ರಮೆ ಮೂಡಿಸುವಂತಿದೆ.
 
 
 
ಈ ವಿಡಿಯೋದಲ್ಲಿ ಹೆಲಿಕಾಪ್ಟರ್​ನಲ್ಲಿರುವ ಇಬ್ಬರು ಪೈಲಟ್​ಗಳನ್ನು ಗುಂಡಿಟ್ಟು ಹತ್ಯೆ ನಡೆಸಲಾಗಿರುವ ಚಿತ್ರಣವಿದೆ. ಈ ನಿಟ್ಟಿನಲ್ಲಿ ಸಿರಿಯಾ ವಿರುದ್ಧದ ರಷ್ಯಾ ಯೋಧರ ಹೋರಾಟ ಈಗ ಇನ್ನಷ್ಟು ಚುರುಕು ಪಡೆದುಕೊಂಡಿದೆ.
 
 
 
ಪೈಲಟ್ ನಿಯಂತ್ರಣ ತಪ್ಪಿದ ಹೆಲಿಕಾಪ್ಟರ್ ತಿರುಗಿಕೊಳ್ಳುತ್ತ ಪತನಗೊಂಡಿದ್ದು, ಭೂಸ್ಪರ್ಶದ ಬಳಿಕ ಬೆಂಕಿ ಹೊತ್ತುಕೊಂಡು ಸುಟ್ಟು ಭಸ್ಮವಾಗಿದೆ. ಈ ಎಲ್ಲಾ ಘಟನೆಗಳನ್ನೂ ಚಿತ್ರೀಕರಿಸಿಕೊಂಡಿರುವ ಉಗ್ರರು ಇದೀಗ ವಿಡಿಯೋ ಬಿಡುಗಡೆ ಮಾಡಿದ್ದಾರೆ.
 
 
 
ಪತನಗೊಂಡಿರುವ ಹೆಲಿಕಾಪ್ಟರ್ ರಷ್ಯಾ ಮಿಲಿಟರಿಯ ಮಿಗ್-25 ಆಗಿದ್ದು, ರಷ್ಯಾ ಕೂಡ ಈ ಘಟನೆಯನ್ನು ಖಚಿತ ಪಡಿಸಿದೆ.

LEAVE A REPLY

Please enter your comment!
Please enter your name here