ಹೆದ್ದಾರಿಯಲ್ಲಿ 'ಎಣ್ಣೆ' ಬಂದ್

0
275

ರಾಷ್ಟ್ರೀಯ ಪ್ರತಿನಿಧಿ ವರದಿ
ಇನ್ಮುಂದೆ ಹೆದ್ದಾರಿಗಳಲ್ಲಿ ಮಧ್ಯಪಾನ ವ್ಯಾಪಾರಕ್ಕೆ ಬ್ರೇಕ್ ಬೀಳಲಿದೆ. ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಧ್ಯಮಾರಾಟ ಬಂದ್ ಮಾಡುವಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
 
ಅಲ್ಲದೆ ಇನ್ಮುಂದೆ ಯಾವುದೇ ಹೊಸ ಲೈಸೆನ್ಸ್ ಕೊಡಬಾರದು. ಹಾಲಿ ಲೈಸೆನ್ಸ್ ದಾರರಿಗೆ 2017 ಎ.1 ರವರೆಗೆ ಹೆದ್ದಾರಿಯಲ್ಲಿರುವ ಮಧ್ಯಶಾಪ್ ಗಳನ್ನು ತೆರವು ಗೊಳಿಸುವಂತೆ ಆದೇಶಿಸಲಾಗಿದೆ.
 
 
 
ಇನ್ಮುಂದೆ ಮಧ್ಯದ ಅಂಗಡಿಗಳನ್ನು ಹೆದ್ಧಾರಿಯಿಂದ 500 ಮೀಟರ್ ದೂರದಲ್ಲಿ ಮಾಡಬೇಕು ಎಂದು ಸುಪ್ರೀಂ ಆದೇಶಿಸಿದೆ. ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
 
 
 
ಹೆದ್ದಾರಿಗಳಲ್ಲಿ ಮದ್ಯದ ಅಂಗಡಿಗಳಿರುವುದರಿಂದ ವಾಹನ ಚಾಲಕರು ಮದ್ಯ ಸೇವಿಸಿ ಅಪಘಾತವುಂಟಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಕೋರ್ಟ್ ಈ ಆದೇಶ ನೀಡಿದೆ.

LEAVE A REPLY

Please enter your comment!
Please enter your name here