ಹೆಣ್ಣೂರು ಕೆರೆ – ಸಸ್ಯೋದ್ಯಾನವಾಗಿ ಅಭಿವೃದ್ಧಿ

0
496

ಬೆಂಗಳೂರು ಪ್ರತಿನಿಧಿ ವರದಿ
ಹೆಣ್ಣೂರು ಕೆರೆಯ ಪ್ರದೇಶವನ್ನು ಸಸ್ಯೋದ್ಯಾನವಾಗಿ ಅಭಿವೃದ್ಧಿಪಡಿಸುವ ಹೊಸ ಯೋಜನೆ ಜಾರಿಗೆ ಸರ್ಕಾರ ಅನುಮೋದನೆ ನೀಡಿದ್ದು, ಒಟ್ಟು ರೂ. 897.75 ಲಕ್ಷಗಳ ವೆಚ್ಚದಲ್ಲಿ ಹೆಣ್ಣೂರು ಕೆರೆ ಪ್ರದೇಶವನ್ನು ಸಸ್ಸ್ಯೋದ್ಯಾನವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಪ್ರಸಕ್ತ ಸಾಲಿನಲ್ಲಿಯೂ ಸಹ ಮುಂದುವರಿಸಲಾಗಿದೆ ಎಂದು ಬೆಂಗಳೂರು ನಗರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
2014-15ನೇ ಸಾಲಿನಲ್ಲಿ ಹೆಣ್ಣೂರು ಕೆರೆ ಪ್ರದೇಶದಲ್ಲಿ 61.026 ಲಕ್ಷ ಹಾಗೂ 2015-16ನೇ ಸಾಲಿನಲ್ಲಿ ರೂ. 175.552 ಲಕ್ಷಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದ್ದು, 2016-17ನೇ ಸಾಲಿನಲ್ಲಿಯೂ ಸಹ ಕಾಮಗಾರಿಗಳನ್ನು ಮುಂದುವರೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನಗರದಲ್ಲಿ ವಾಸಿಸುವ ನಾಗರಿಕರಿಗೆ ಉತ್ತಮ ಪರಿಸರ ಒದಗಿಸಲು ಸಸ್ಯೋದ್ಯಾನಗಳನ್ನು ನಿರ್ಮಿಸುವ ಯೋಜನೆಗೆ ಜನಪ್ರತಿನಿಧಿಗಳು, ಶಾಸಕರು, ಸಂಘಸಂಸ್ಥೆಗಳು ಬೇಡಿಕೆಯನ್ನು ಸಲ್ಲಿಸಿರುವುದನ್ನು ಪರಿಗಣಿಸಿ ಸರ್ಕಾರವು ಬೆಂಗಳೂರು ನಗರ ಸಮೀಪ 4 ಸಸ್ಯೋದ್ಯಾನಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದ್ದು, ಅದರಲ್ಲಿಇ ಹೆಣ್ಣೂರು ಕೆರೆ ಸಸ್ಯೋದ್ಯಾನ ಪ್ರದೇಶವು ಸಹ ಒಂದಾಗಿರುತ್ತದೆ. ಹೆಣ್ಣೂರು ಕೆರೆಯ ಜಲಾನಯನ ಪ್ರದೇಶವು 2.65 ಚ.ಕಿ.ಮೀ. ಇದ್ದು, ವಸತಿ ಪ್ರದೇಶಗಳಿಂದ ಆವೃತ್ತವಾಗಿರುತ್ತದೆ. ಈ ಕೆರೆಯು ಅನುಪಯುಕ್ತ ಕೆರೆಯಾಗಿರುವುದರಿಂದ ಕೆರೆಯ ಪ್ರದೇಶದ ಒತ್ತುವರಿಯನ್ನು ತಡೆಗಟ್ಟುವ ಉದ್ದೇಶದಿಂದ ಎನ್.ಲಕ್ಷಣ್‍ರಾವ್ ಸಮಿತಿಯು ಅರಣ್ಯ ಇಲಾಖೆಯಿಂದ ಈ ಕೆರೆ ಪ್ರದೇಶವನ್ನು ಅಭಿವೃದ್ಧಿಪಡಿಸಲು ಶಿಫಾರಸ್ಸು ಮಾಡಿರುತ್ತದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here