ಹೆಣ್ಣು ಮಗುವಿನ ತಂದೆಯಾದ ಶಾಹಿದ್

0
348

 
ರಾಷ್ಟ್ರೀಯ ಪ್ರತಿನಿಧಿ ವರದಿ
ಬಾಲಿವುಡ್ ನಟ ಶಾಹಿದ್ ಕಪೂರ್ ಅಪ್ಪ ಆಗಿದ್ದಾರೆ. ಶಾಹಿದ್ ಕಪೂರ್ ಪತ್ನಿ ಮೀರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮುಂಬೈಯ ಖಾರ್‍ ನಲ್ಲಿರುವ ಹಿಂದೂಜಾ ಹೆಲ್ತ್ ಕೇರ್ ಸರ್ಜಿಕಲ್ ಹಾಸ್ಪಿಟಲ್‍ನಲ್ಲಿ ಮೀರಾ ರಾತ್ರಿ 7.45 ರ ವೇಳೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
 
ಮೀರಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗಳು ಆರೋಗ್ಯವಾಗಿದ್ದಾರೆ ಎಂದು ಶಾಹೀದ್ ಕಪೂರ್ ಟ್ವೀಟ್ ಮಾಡಿದ್ದಾರೆ. ಮತ್ತು ಶುಭ ಕೋರಿದ ಎಲ್ಲರಿಗೂ ಧನ್ಯವಾದ ಅಂತಾ ಹೇಳಿದ್ದಾರೆ.

LEAVE A REPLY

Please enter your comment!
Please enter your name here