ಹೆಚ್ಚು ಅರವಳಿಕೆ ನೀಡಿದ್ದಕ್ಕೆ ಹುಲಿ ಸಾವು!

0
528

ಮೈಸೂರು ಪ್ರತಿನಿಧಿ ವರದಿ
ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಗಂಡತ್ತೂರು ಗ್ರಾಮದ ಬಳಿ ನಿನ್ನೆ ಸೆರೆಸಿಕ್ಕಿದ್ದ ಹುಲಿ ಸಾವನ್ನಪ್ಪಿದೆ. ಹೆಚ್ಚು ಅರವಳಿಕೆ ನೀಡಿದ ಹಿನ್ನೆಲೆಯಲ್ಲಿ ಹುಲಿ ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ.
 
 
ಹುಲಿ ಸಾವಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರಣ ಎಂದು ಆರೋಪಿಸಲಾಗಿದೆ. ಸೋಮವಾರ ರೈತ ಗಣೇಶ್ ಎಂಬುವವರಿಗೆ ಸೇರಿದ ತೋಟದಲ್ಲಿ ಹುಲಿ ಸೆರೆಸಿಕ್ಕಿತ್ತು. ಹುಲಿ ಹಸುವನ್ನು ಕೊಂದು ಹಸುವಿನ ಪಕ್ಕದಲ್ಲೇ ಕುಳಿತಿತ್ತು.ನಂತರ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನು ಸೆರೆ ಹಿಡಿದಿದ್ದರು. ಈ ವೇಳೆಗಾಗಲೇ ಹುಲಿ ಅಸ್ವಸ್ಥಗೊಂಡಿತ್ತು.
 
 
ಅವೈಜ್ಞಾನಿಕವಾಗಿ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. 4ಕ್ಕೂ ಅಧಿಕ ಅರವಳಿಕೆ ನೀಡಿದ್ದೇ ಹುಲಿ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ.

LEAVE A REPLY

Please enter your comment!
Please enter your name here