ಹೃದಯಸ್ಪರ್ಶಿ ಬೀಳ್ಕೊಡುಗೆ

0
242

ಮೈಸೂರು ಪ್ರತಿನಿಧಿ ವರದಿ
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತ ಆನೆ ಅರ್ಜುನ ಇಂದು ನಾಡಿನಿಂದ ಕಾಡಿನತ್ತ ಹೊರಟಿದ್ದಾನೆ. ಮೈಸೂರಿನಲ್ಲಿ ಸಾರ್ವಜನಿಕರು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ.
 
 
ನೂರಾರು ಸಾರ್ವಜನಿಕರು ಅರ್ಜುನನತ್ತ ಕೈಬೀಸಿ ಬೀಳ್ಕೊಟ್ಟಿದ್ದಾರೆ.  5ನೇ ಬಾರಿಯೂ ಅರ್ಜುನ ಯಶಸ್ವಿಯಾಗಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದಾನೆ. ಈಗ ಅರ್ಜುನ ನೇತೃತ್ವದ ದಸರಾ ಗಜಪಡೆ ಕಾಡಿನತ್ತ ಪ್ರಯಾಣಿಸಿದೆ.
 
 
ಅರಮನೆ ಜಯಮಾರ್ತಾಂಡ ದ್ವಾರದ ಮೂಲಕ ಗಜಪಡೆಗಳ ನಿರ್ಗಮನವಾಗಿದೆ. ಲಾರಿಗಳು ಮೂಲಕ ದಸರಾ ಆನೆಗಳು ಆನೆ ಶಿಬಿರಗಳತ್ತ ಸಾಗಿದೆ. ಜತೆಗೆ ಮಾವುತರು, ಕಾವಾಡಿಗಳು ಸಹ ಆನೆ ಶಿಬಿರಗಳತ್ತ ಪ್ರಯಾಣ ಬೆಳೆಸಿದ್ದಾರೆ.

LEAVE A REPLY

Please enter your comment!
Please enter your name here