ಹೂವುಗಳು ಅಲಂಕಾರಕ್ಕೆ ಮಾತ್ರವಲ್ಲ, ಸಂಪಾದನೆಗೂ ದಾರಿ

0
615

 
ನಮ್ಮ ಪ್ರತಿನಿಧಿ ವರದಿ
ಇತ್ತೀಚೆಗೆ ಶ್ರೀ ಧ.ಮಂ. ಪದವಿ ಕಾಲೇಜಿನ ಗೃಹವಿಜ್ಞಾನ ವಿಭಾಗದಿಂದ ಹೂ ಜೋಡಣೆ, ಹೂ ಗುಚ್ಚ ತಯಾರಿ ಮತ್ತು ಟೇಬಲ್ ಸೆಟ್ಟಿಂಗ್ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿತೆಯನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಚಂದ್ರಿಕಾ ಆಗಮಿಸಿದ್ದರು.
 
 
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣುಮಕ್ಕಳು ಪಾಠದ ಜೊತೆಗೆ ಕ್ರಿಯಾತ್ಮಕ ಚಟುವಟಿಕೆಗಳಲ್ಲೂ ಭಾಗವಹಿಸಿ ಸ್ವಾವಲಂಬಿಯಾಗಿ ಬದುಕಲು ಕಲಿಯಬೇಕು. ಹೂವುಗಳನ್ನು ಜೋಡಿಸುವುದರ ಹಾಗೂ ಹೂಗುಚ್ಚಗಳನ್ನು ಮಾಡಿ ಮಾರುವುದರ ಮೂಲಕ ಸಂಪಾದನೆಯನ್ನು ಗಳಿಸಬಹುದು ಅಲ್ಲದೆ ತಾನಿರುವ ಸ್ಥಳವನ್ನು ಅಲಂಕರಿಸಬಹುದು ಎಂದು ಕಿವಿಮಾತು ಹೇಳಿದರು.
 
 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ಮುಖ್ಯಸ್ಥರಾದ,ಡಾ.ಬಿ.ಪಿ.ಸಂಪತ್ ಕುಮಾರ್ ವಹಿಸಿದ್ದರು. ವಿಭಾಗ ಅಧ್ಯಾಪಕಿ ಶೋಭಾ ಸ್ವಾಗತಿಸಿ, ಮುಖ್ಯಸ್ಥೆ ಆಲ್ಫೋನ್ಸಮ್ಮ ವಂದಿಸಿದರು.

LEAVE A REPLY

Please enter your comment!
Please enter your name here