ಹೂಳು-ಖೂಳು-ಕೀಳು

0
281

ಮಸೂರ ಅಂಕಣ: ಆರ್ ಎಂ ಶರ್ಮ
ಹೂಳು ಎಂದರೆ ನಾವಿಲ್ಲಿ ಪ್ರಸ್ತುತಾಡಿಸುವ ಚಿಂತನೆಗೆ ಹೊಂದಿಕೊಂಡಂತೆ-ನೀರಿನ ಸಂಗ್ರಹಾಗಾರಗಳಲ್ಲಿ ಅಡಿಯಲ್ಲ್ ಶೇಖರಗೊಳ್ಳುವ ಮಣ್ಣು ಅಷ್ಟೇ.
ಖೂಳು ಎಂದರೆ-ಹೊಟ್ಟೆಗೆ ಆಧಾರ-ಆಹಾರ-ಊಟ ಎಂತ.
ಕೀಳು ಎಂದರೆ ಬೆಲೆಯಿಲ್ಲದ-ಬೆಲೆಕೊಡದ-ನಿಲ೯ಕ್ಷ್ಯದ ಸಂಗತಿ ಎಂತ.
ನಾವೀಗ ಚಚಿ೯ಸುವ ವಿಷಯ-ಕೆರೆಗಳಲ್ಲಿ,ಅಣೆಕಟ್ಟುಗಳಲ್ಲಿ ಸಂಗ್ರಹಗೊಂಡ-ಸಂಗ್ರಹಿಸಿದ ನೀರಿನ ಅಡಿಯಲ್ಲಿ ಅಥಾ೯ತ್ ಆಗರಗಳ ತಳದಲ್ಲಿ ಜಮೆಗೊಂಡ ವಸ್ತು.
ಇದು ವ್ಯಾವಹಾರಿಕವಾಗಿ-“ಹೂಳು”- ಹಾಳಿನ-ಹಾಳುಮಾಡುವ ವೈರಿ.
ಆದರೆ ಈ ವಾದದಲ್ಲಿ ಹುರುಳಿಲ್ಲ-ಕಾರಣ ಕುರುಡು ಯಾಜಮಾನ್ಯಕ್ಕೆ ಅದರ-ಅಂದರೆ ಹೂಳಿನ ಇತಿಹಾಸ ತಿಳಿಯದು-ತಿಳಿಯುವ ಅಪೇಕ್ಷೆ ಅಷ್ಟಕ್ಕಷ್ಟೇ.
ಇದೇ ಕಷ್ಟ-ಕ್ಲಿಷ್ಟ ಸತ್ಯವಾಗಿಯೂ.
ಅದಕ್ಕಾಗಿಯೇ ನಾವು ಈ ವಸ್ತುವನ್ನು ಆಳವಾದ-ಕರಾರುವಾಕ್ಕಾದ-ವಸ್ತುನಿಷ್ಟವಾದ ವಿಚಾರಮಂಡನೆಗೆ ಚುನಾಯಿಸಿದ್ದು.
ನಮ್ಮ ಅನುಭವ,ವೀಕ್ಷಣೆ,ಸಂಭಂದಪಟ್ಟವರಲ್ಲಿ ವಿಚಾರವಿನಿಮಯ ಇವುಗಳ ಸಾಂದ್ರೀಕೃತ ಸಂಗತಿ ಎಂದರೆ
ಬೇಸಿಗೆಗಳಲ್ಲಿ,ಮಳೆಯ ಅಭಾವದಲ್ಲಿ ಸಂಗ್ರಹಿತ ನೀರು ಉಪಯೋಗಿಸಿದ ನಂತರ ಕಡಿಮೆಯಾಗಿ ಆಗೊಮ್ಮೆ-ಈಗೊಮ್ಮೆ ಕೆರೆ ಕುಂಟೆಗಳು ಬತ್ತಿಹೋದಾಗ-ತಳದಲ್ಲಿ ಒಟ್ಟಾದ ಮಣ್ಣು ನೋಡಲು ಸಿಗುತ್ತದೆ.
ಇದನ್ನು ವ್ಯವಸಾಯಗಾರರು ಅಗೆದು ಗದ್ದೆ-ಹೊಲ-ತೋಟ ಇಲ್ಲೆಲ್ಲಾ ಬೆಳೆಗಳಿಗೆ ಗೊಬ್ಬರವಾಗಿ ಬಳಸುವುದು ಸವೇ೯ಸಾಮಾನ್ಯ-ಮಲೆನಾದು ಪ್ರದೇಶಗಳಲ್ಲಿ.
ಇದೇ ಪದ್ಧತಿ ಅನ್ಯತ್ರವೂ ಇರಬಹುದು.
ಅದು ಹಾಗಿರಲಿ.
ಅಣೆಕಟ್ಟುಗಳಲ್ಲಿಯೂ ಇದೇ ಸತ್ಯ.
ಇನ್ನು ಕೆಲ ಸಂಗ್ರಹಾಗಾರಗಳಲ್ಲಿಉಳಿದ ನೀರಿನಡಿಯ ಈ ವಸ್ತು ಇದ್ದರೂ ಕಾಣಿಸದು ಕಣ್ಣಿಗೆ ನೋಡಲು.
ಆದರೆ ಒಂದು ಎತ್ತರಿಸಿದ ಧನಿಯ ಆಕ್ರೋಶ-ಅಳಲು-ಹುಯಿಲು-ನೀರಿನ ಸಂಗ್ರಹ ಪರಿಣಾಮಕಾರಿಯಾಗಲು ಹೂಳೆತ್ತ ಬೇಕೆಂಬ ಆಗ್ರಹ.
ಪಾರುಪತ್ಯದ ಯಾಜಮಾನ್ಯಕ್ಕೆ ಇದು ಮುಜುಗರದ ಸಂಗತಿ.
ಹೂಳೆತ್ತಲು-ಹಣ,ಎತ್ತಿದ ಹೂಳನ್ನು ಸಂಗ್ರಹಿಸಿಡಲು ಅಗತ್ಯವಾದ ಸ್ಥಳಾವಕಾಶ- ಇದು ಆಗದ-ಬೇಡದ ಚಾಕರಿ.
ಅದಕ್ಕೇ ಈ ಕೆಲಸಕ್ಕೆ ಮನಮಾಡಲು ಚೌಕಾಸಿ.
ನಿಜಕ್ಕೂ ಈಗಂತೂ-ಹೊಲ ಗದ್ದೆ ಇತ್ಯಾದಿ ಒಕ್ಕಲಿನ ಪ್ರದೇಶಗಳ ಮಣ್ಣಿನ ಆರೋಗ್ಯದ ಬಗ್ಗೆ ಖಾತ್ರಿಪಡಿಸಿಕೊಳ್ಳಲು-“ಮಣ್ಣಿನ ಆರೋಗ್ಯ ತಪಾಸಣೆ-ದಾಖಲಾತಿಸಲು-
ಸಾಯಿಲ್ ಹೆಲ್ತ್ ಕಾಡ್೯’ ಪ್ರಚಲಿತವಿದೆ.
ಆ ಸೌಭಾಗ್ಯಕ್ಕೆ ಹೂಳುಮಣ್ಣಿನ ಆರೋಗ್ಯ ತಪಾಸಣೆ-ವಿವರಗಳ ದಾಖಲೆ ನ್ಯಾಯವಲ್ಲವೇ?
ಇಲ್ಲಿ-ಕೆರೆಗಳ,ಅಣೆಕಟ್ಟುಗಳ ಆರೋಗ್ಯದ ತಪಾಸಣೆ ಸರಿಯಲ್ಲವೇ?
ಅದು ಹಾಗಿರಲಿ-ವ್ಯಾವಹಾರಿಕವಾಗಿ ಯೋಚಿಸೋಣ-
ಕೆರೆಗಳ,ಅಣಕಟ್ಟುಗಳ ಸಂಗ್ರಹಸಾಮಥ್ಯ೯ದ ಶೇಕಡಾ ನೂರಕ್ಕೆ ನೂರು ಔಪಯೋಗಿಕವಾಗಬೇಕಾದರೆ ಕೆರೆಯ ಸಂಪೂಣ೯,ಅಣೆಕಟ್ಟೆಯ ಸಂಪೂಣ೯ ಸಾಮಥ್ಯ೯ದ ಲಾಭಬೇಡವೇ?
ಸಂಗ್ರಹಾಗಾರದ ಕೆಲಭಾಗ-ಅಂದಾಜು ಶೇ ೨೫-೩೫ ರಷ್ಟು ಹೂಳಿನಪಾಲಾದರೆ ಅಲ್ಲಿಗೆ ನೀರಿನ ಪಾಲು ಕೇವಲಶೇ ೬೫-೭೫ ರ ದಾಮಾಶದಲ್ಲಿ ಅಲ್ಲವೇ ಲಭ್ಯ?
ನೀರಿನ ಲಭ್ಯತೆ-ಮಾಲೆ,ಹರಿದುಬರುವ ನೀರು ಇವು ತುಂಬಲು ಜಗವಿಲ್ಲದೇ ಪೋಲಗದೇ ಇರಲು ಸಾಧ್ಯವೇ?
ಆಳಕ್ಕೆ ಗಾಳ,ನೀರಿಗೆ ಬರ,ವಾದಗಳಿಗೆ ವರ-ಏನೀ ಪರಿ-ಏಕೀ ಉಸಾಬರಿ?
ಹಾಗಾದರೆ ಇಲ್ಲವೇ ಬರೋಬ್ಬರಿ?
ಇದೇ ಮಹಾ”ವರಿ”-ವೈರಿ ಕೂಡಾ.
ಈಗಿಲ್ಲದೆ ಸರಿಯಾದ ಗಣಿತ-ದೃಗ್ಗಣಿತ-ಕಗ್ಗಣಿತ-ನಿತಾಂತಸತ್ಯ.
ಹೂಳೆತ್ತಲು ತಗುಲುವ ಖಚು೯,ಹೂಳಿನಲ್ಲಿ ಗೊಬ್ಬರವಾಗಲು ಇರುವ ವೈಷಿಷ್ಟ್ಯಗಳು,ಇದರ ಮೌಲಿಕತೆ,ಒಂದೊಮ್ಮೆ ಸಂಗ್ರಹಿಸಿಡಲೇಬೇಕಾದರೆ ಆಗ ತಲೆದೋರುವ ಖಚು೯,
ನಷ್ಟವಾದ-ನಷ್ಟವಾಗಲುಬಿಟ್ಟ ನೀರಿನ ಬೆಲೆ,ಈ ನೀರಿನಿಂದ ನಷ್ಟವಾದ-ಆಗಿಸಲ್ಪಟ್ತ ಬೆಳೆಹಾನಿಯ ಮೌಲ್ಯ-
ಇವೆಲ್ಲವುಗಳ ವ್ಯಾಪಕ ಅಧ್ಯಯನ ಸಾಧು-ಸಿಂಧು-ಸಾಧ್ಯ-ಆದ್ಯ-ಆಢ್ಯ ಕೂಡಾ.
ನಂತರ ಲಾಭ ನಷ್ಟಗಳ ತುಲನೆ-ಹೊಗಳು-ತೆಗಳು ಎಲ್ಲಾ.
ನೀರಿಗೆ ಬರ-ಬೆಳೆಗೆ ಹಾನಿ-ಖೂಳಿಗೆ ಕೊಳ್ಳೆ.
ರೈತನಿಗೆ ನಷ್ಟ,ತಿನ್ನುವವನಿಗೆ ಸೊನ್ನೆ,ದೇಶಕ್ಕೆ ಹೊರೆ, ಸಾಲಕ್ಕೆ ಮೊರೆ,ಶೀಲಕ್ಕೆ ಧಕ್ಕೆ,ಶೂಲಕ್ಕೆ ರಕ್ಕೆ ಪುಕ್ಕ ಎಲ್ಲಾ ಅಚ್ಚುಕಟ್ಟು.
ಇಲ್ಲಿ ಯಾಜಮಾನ್ಯವಿದೆಯೇ-ಯಮರಾಜ್ಯವಿದೆಯೇ ಅದೇ ಚಿಂತನದ, ಮಂಥನದ ಕೇಂದ್ರಬಿಂದು.
ಹೂಳು-ಖೂಳಿಗೆ ಕನ್ನಹಾಕಿತು-ಹಾಕಿಸಿತು.
ಹೂಳನ್ನು ಕೀಳಾಗಿ ಕಂಡರು-ನಂತರ ಕಣ್ ಕಣ್ ಬಿಟ್ಟರು-ಕಣ್ ಕಣ್ ಬಿಡಿಸಿದರು-ಇದೇ ಆಡಳಿತ-ಇಲ್ಲೇ ಜಡ್ದು-ಜಿದ್ದು-ಜಿಡ್ಡು ಎಲ್ಲಾ ಅನನ್ಯ-ಅನ್ಯೋನ್ಯ.
ಸಮಯಬದ್ಧವಾಗಿ ಮಾಡದ-ಮಡಿಸದ ಕಾಯಕ-ಮಾಯಕವಲ್ಲ-ಮೋಹಕ-ಅಪ್ರಾಮಾಣಿಕ-ಘಾತುಕ ಅಷ್ಟೇ.
ಇಂಗ್ಲಿಶ್ ಗಾದೆ ಮಾತು-
“ಎ ಸ್ಟಿಚ್ ಇನ್ ಟೈಂ ಸೇವ್ಸ್ ನೈನ್” ಎಂಬುದು ನೂರಕ್ಕೆ ನೂರು ಸತ್ಯವಲ್ಲವೇ ಇಲ್ಲಿ-ಈಗ?
ರೈತನಿಗಿಲ್ಲ,ತಿನ್ನುವವನಿಗಿಲ್ಲ,ಎಲ್ಲಾ ಹೂಳಿಗೆ ಸಮಪ೯ಣೆ.
ಹೂಳು ಮೇಲೆ ಇನೆಲ್ಲ ಕೆಳಗೆ.
ಜನಸಾಮಾನ್ಯರು,ಮಾನ್ಯರು ,ಸನ್ಮಾನ್ಯರು,ಸಂವೇದನಾಶೀಲರು,ಓದುಗಪ್ರಭುಗಳು ಚಿಂತಿಸಲಿ,ಚಚಿ೯ಸಲಿ,ವಾದಿಸಲಿ,ಸೋಲಿಸಲಿ ಒಡ್ಡನ್ನು,ರಡ್ದನ್ನು,ಜಡ್ಡನ್ನು.
ಆಗೆಲ್ಲಾ ತಿಳಿ,ತಿಳಿವು ಝಳ-ಝಳ.
ಇನ್ನೆಲ್ಲಿ ಹುಳ-ಹೂಳು?
ರೈತ ಅನ್ನದ ಒಡೆಯ.
ಅನ್ನ-“ತದ್ವ್ರತಂ-ದೈವೋಪಾಸನೆ”.
ಈ ಉಪಾಸನೆ ಮಾಡದೇ ಉಪವಾಸಕ್ಕೆ ವನವಾಸ?
ಅನ್ನದ ಋಣ ಉಸಿರಿರುವರೆಗೂ ದುಡಿಸುತ್ತದೆ,ದಣಿಸುತ್ತದೆ,ಮೀರಿದರೆ ದಂಡಿಸುತ್ತದೆ.
ದಣ್ಡನೀತಿ ಇಲ್ಲಿ ಮೇರು.
ನೀರಿನ ದಂಡನೀತಿ-ಎಲ್ಲಾ ಏರುಪೇರು.
ಆರ್‍.ಎಂ.ಶಮ೯

LEAVE A REPLY

Please enter your comment!
Please enter your name here