ಹುಸಿ ಬಾಂಬ್ ಬೆದರಿಕೆ ಕರೆ

0
613

 
ರಾಷ್ಟ್ರೀಯ ಪ್ರತಿನಿಧಿ ವರದಿ
ಇಂದು ದೆಹಲಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ. 1 ವಾರದಲ್ಲಿ ಒಟ್ಟು 62 ಹುಸಿ ಬಾಂಬ್ ಕರೆ ಬಂದಿದೆ.
 
 
ಮಾರ್ಚ್ 22ರಂದು ಇಂಡಿಗೋದ ಹತ್ತು ವಿಮಾನಗಳಿಗೆ ಬೆದರಿಕೆ ಕರೆ ಬಂದಿದೆ. ಮಾ.23ರಂದು ಜೆಟ್ ಏರ್ ವೇಸ್ ನ ವಿಮಾನಗಳಲ್ಲಿ ಬಾಂಬ್ ಇರುವುದಾಗಿ ಕರೆ ಬಂದಿತ್ತು.
 
ಇದರಿಂದ ಪ್ರಯಾಣಿಕರಿಗೆ ಮತ್ತು ಏರ್ ಲೈನ್ಸ್ ಗಳಿಗೆ ಭಾರಿ ತೊಂದರೆಯುಂಟಾಗಿದೆ. ಬೆದರಿಕೆ ಕರೆಯಿಂದಾಗಿ ಏರ್ ಲೈನ್ಸ್ ಕಂಪನಿಗಳಿಗೆ 1.5 ರಿಂದ 2 ಕೋಟಿವರೆಗೆ ನಷ್ಟ ಉಂಟಾಗಿದೆ. ಆದರೆ ಇದುವರೆಗೂ ಬೆದರಿಕೆ ಕರೆ ಮಾಡಿದ ಆರೋಪಿಗಳು ಪತ್ತೆಯಾಗಿಲ್ಲ. ಬಹುತೇಕ ಇಂಟರ್ ನೆಟ್ ಕರೆಗಳಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಕಷ್ಟವಾಗಿದೆ.

LEAVE A REPLY

Please enter your comment!
Please enter your name here