ಉದ್ಯೋಗವಾರ್ತೆ

ಹುದ್ದೆ ಖಾಲಿ ಇದೆ

ಉದ್ಯೋಗ ವಾರ್ತೆ
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಮಂಗಳೂರು (ನಗರ) ವ್ಯಾಪ್ತಿಚಿುಲ್ಲಿ ಖಾಲಿ ಇರುವ ಅಂಗನವಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾತದೆ.
 
ಪಡುಹೊಗೆ ವಾರ್ಡ್ – 60 ತೋಟ ಬೆಂಗ್ರೆ ಗ್ರಾಮ, ಮರೋಳಿ ತಾತಾವು ವಾರ್ಡ್ – 37 ಮರೋಳಿ ಗ್ರಾಮ, ಕುಂಜತ್ತ್ಬೈಲ್ ಬಸವನಗರ 1 ವಾರ್ಡ್ – 13 ಕುಂಜತ್ತ್ಬೈಲ್ ಗ್ರಾಮ, ಆನಂದನಗರ ಆಕಾಶಭವನ ವಾರ್ಡ್- 18 ಕಾವೂರು ಗ್ರಾಮ, ಕಾವೂರು ಶಾಂತಿನಗರ ವಾರ್ಡ್ 15 ಕುಂಜತ್ಬೈಲ್ (ದಕ್ಷಿಣ) ಕುಂಜತ್ಬೈಲ್, ಉರ್ವಕಾಶ್ಯೂ ವಾರ್ಡ್ -26ನೇ ಬೋಳೂರು, ಕಾಫಿಗುಡ್ಡೆ-18ನೇ ಕಾವೂರು, ಬೀಡು -52ನೇ (ಸಮೀಪದ) ಕಣ್ಣೂರು, ಒಟ್ಟು 8 ಅಂಗನವಾಡಿ ಸಹಾಯಕಿಯರ ಹುದ್ದೆಗೆ 4ರಿಂದ 9ನೇ ತರಗತಿ ವಿದ್ಯಾಭ್ಯಾಸವುಳ್ಳ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಬುದು.
ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 4, ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಸಿಲ್ವರ್ ಕ್ರಾಸ್ ರೋಡ್ ವೆಲೆನ್ಸಿಯಾ, ಬಿಷಪ್ ವಿಕ್ಟರ್ ಅಡ್ಡರಸ್ತೆ, ಮಂಗಳೂರು ಇವರನ್ನು ಸಂಪರ್ಕಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
 
 
 
ಮರು ಅರ್ಜಿ ಆಹ್ವಾನ
ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆಯ ಮೂಡಬಿದರೆ ಪುರಸಭೆ ವ್ಯಾಪ್ತಿಯ ಕರಿಂಜೆ ಗ್ರಾಮದ ಬಗ್ಗಜಾಲ್ ಅಂಗನವಾಡಿ ಕೇಂದ್ರದಲ್ಲಿ ತೆರವಾಗಿದ್ದ ಸಹಾಯಕಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿತ್ತು. ಆದರೆ ಸದರಿ ಕೇಂದ್ರಕ್ಕೆ ಅರ್ಹ ಫಲಾನುಭವಿಗಳಿಂದ ಅರ್ಜಿ ಸ್ವೀಕೃತವಾಗದ ಕಾರಣ ನಿಯಮಾನುಸಾರ ಪಕ್ಕದ ಕಲ್ಲಬೆಟ್ಟು ಗ್ರಾಮದ ಸಾಮಾನ್ಯ ವರ್ಗದ ಅಭ್ಯರ್ತಿಗಳಿಂದ ಅರ್ಜಿಗಳನ್ನು ಮರು ಅಹ್ವಾನಿಸಲಾಗಿದೆ.
 
 
 
 
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಮಂಗಳೂರು(ಗ್ರಾ) ಸ್ವೀಕಾರ ಕೇಂದ್ರ ಕಟ್ಟಡ, ಮೂಡುಶೆಡ್ಡೆ, ವಾಮಂಜೂರು ವ್ಯಾಪ್ತಿಯ ನಿಡ್ಡೋಡಿ ಬಾಪೂಜಿ ಶಾಲೆ, ಗಾಡಿಗದ್ದೆ, ಪಾವೂರು ಅಂಗನವಾಡಿ ಕೇಂದ್ರ, ಎಡಪದವು ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಜುಲೈ 4 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಮಂಗಳೂರು(ಗ್ರಾ) ಇವರನ್ನು ಸಂಪರ್ಕಿಸುವಂತೆ ತಿಳಿಸಿದೆ

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here