ಹುದ್ದೆಗೆ ಅರ್ಜಿ ಆಹ್ವಾನ

0
181

 
ಉದ್ಯೋಗ ವಾರ್ತೆ:
ಬಂಟ್ವಾಳ ತಾಲೂಕಿನ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ದೇವಸ್ಯಪಡೂರು ಗ್ರಾಮದ ದೇವಸ್ಯಪಡೂರು ಅಂಗನವಾಡಿ ಕೇಂದ್ರ, ಸರಪಾಡಿ ಗ್ರಾಮದ ಮುನ್ನಲಾಯಿಪದವು ಅಂಗನವಾಡಿ ಕೇಂದ್ರ, ಬಿ.ಕಸಬಾ ವಾರ್ಡ್ ಸಂಖ್ಯೆ 9 ಗ್ರಾಮದ ಕೆಳಗಿನಪೇಟೆ ಅಂಗನವಾಡಿ ಕೇಂದ್ರ, ಪಿಲಾತಬೆಟ್ಟು ಗ್ರಾಮದ ನೈನಾಡು ಅಂಗನವಾಡಿ ಕೇಂದ್ರ, ಇರ್ವತ್ತೂರು ಗ್ರಾಮದ, ಮೇಲ್ಪತ್ತರ ಅಂಗನವಾಡಿ ಕೇಂದ್ರ, ಸಜಿಪಮುನ್ನೂರು ಗ್ರಾಮದ ಉದ್ದೊಟ್ಟು ಅಂಗನವಾಡಿ ಕೇಂದ್ರ, ಪುದು ಗ್ರಾಮದ ಕುಂಪನಮಜಲು 1 ಅಂಗನವಾಡಿ ತುಂಬೆ ಗ್ರಾಮದ ಕೆಳಗಿನ ತುಂಬೆ ಅಂಗನವಾಡಿ ಕೇಂದ್ರಗಳಿಗೆ ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿಗಳಿಂದ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
 
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಬಿ.ಇ.ಓ ಆಫೀಸಿನ ಬಳಿ ಕೈಕುಂಜೆ, ಬಿ.ಸಿ. ರೋಡ್ ಇಲ್ಲಿ ಇಟ್ಟಿರುವ ಟೆಂಡರ್ ಡಬ್ಬಿಗೆ ಏ. 22 ರ ಸಂಜೆ 5.30 ರೊಳಗೆ ಅರ್ಜಿ ಹಾಕುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here