ಬೆಂಗಳೂರು ಪ್ರತಿನಿಧಿ ವರದಿ
ಮುಖ್ಯ ಕಾರ್ಯದರ್ಶಿ ಆಗಲಿಲ್ಲವೆಂದು ಜ್ಯೋತಿಷಿಯ ಮೊರೆ ಹೋದ ಘಟನೆ ಸಂಭವಿಸಿದೆ. ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಜ್ಯೋತಿಷಿಯ ಮೊರೆ ಹೋಗಿದ್ದಾರೆ.
ರತ್ಮಪ್ರಭಾ ಗೆ ಸರ್ಕಾರದ ಮುಖ್ಯಕಾರ್ಯದರ್ಶಿ ಸ್ಥಾನ ಕೈತಪ್ಪಿದಕ್ಕೆ ಜ್ಯೋತಿಷಿಯ ಮೊರೆ ಹೋಗಿದ್ದಾರೆ. ಈಗ ರತ್ನಪ್ರಭಾ ಅವರು ಜ್ಯೋತಿಷಿ ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ.
ಬಾಗಿಲಿನ ಅಪಶಕುನದಿಂದ ನಿಮಗೆ ಮುಖ್ಯಕಾರ್ಯದರ್ಶಿ ಸ್ಥಾನ ಸಿಕ್ಕಿಲ್ಲವೆಂದು ಜ್ಯೋತಿಷಿ ಸಲಹೆ ನೀಡಿದ್ದಾರಂತೆ. ಈಗ ರತ್ನಪ್ರಭಾ ಅವರು ಕಚೇರಿಯ ಪಶ್ಚಿಮ ಬಾಗಿಲನ್ನು ತೆರೆದಿದ್ದಾರೆ.
ಕಚೇರಿಯ ಪಶ್ಚಿಮಬಾಗಿಲು ಮುಚ್ಚಿಸಿ, ಉತ್ತರ ಬಾಗಿಲಿನಿಂದ ಓಡಾಡುತ್ತಿದ್ದಾರೆ. ಜ್ಯೋತಿಷಿ ಮಾತುಕೇಳಿ ವಿಧಾನಸೌಧದ 3ನೇ ಮಹಡಿಯ ಕಾರ್ನರ್ ನಲ್ಲಿರುವ ಕೊಟಡಿ ಸಂಖ್ಯೆ 331ರ ಬಾಗಿಲು ಬಂದ್ ಮಾಡಿದ್ದಾರೆ. ಕೊಠಡಿಯ ಉತ್ತರ ಬಾಗಿಲಿಗೆ ನಾಮಫಲಕ ಅಳವಡಿಕೆ ಮಾಡಿದ್ದು, ಸೋಮವಾರದಿಂದ ಉತ್ತರ ಬಾಗಿನಿಂದಲೆ ಓಡಾಟ ಶುರು ಮಾಡಲಿದ್ದಾರೆ.
ಪಶ್ಚಿಮ ಭಾಗದಲ್ಲಿ ಸಿಬ್ಬಂದಿ ಮಾತ್ರ ಓಡಾಟಕ್ಕೆ ಫರ್ಮಾನು ಮಾಡಲಾಗಿದೆ. ಕಚೇರಿಯ ಉತ್ತರ ಬಾಗಿಲಿನಿಂದ ರತ್ನಪ್ರಭಾ ಮಾತ್ರ ಓಡಾಟ ನಡೆಸಲಿದ್ದಾರೆ. ರತ್ನಪ್ರಭಾ ಅವರ ಕಚೇರಿಯ ಪಕ್ಕದಲ್ಲೇ ಪುರುಚರ ಶೌಚಾಲಯವಿದೆ.