ಹುದ್ದೆಗಳಿಗೆ ಅರ್ಜಿ ಆಹ್ವಾನ

0
371

ಉದ್ಯೋಗ ವಾರ್ತೆ
ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬಂಟ್ವಾಳ ತಾಲೂಕಿನ 7 ಅಂಗನವಾಡಿ ಕೇಂದ್ರಗಳ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬಾಳೆಪುಣಿ ಗ್ರಾಮದ ನವಗ್ರಾಮ ಅಂಗನವಾಡಿ ಕೇಂದ್ರ, ಮೂಡನಡುಗೋಡು ಗ್ರಾಮದ ಕುಜಿಲಬೆಟ್ಟು ಅಂಗನವಾಡಿ ಕೇಂದ್ರ, ಕಾಡಬೆಟ್ಟು ಗ್ರಾಮದ ಉಗ್ಗಬೆಟ್ಟು, ಕುಕ್ಕಿಪಾಡಿ ಗ್ರಾಮದ ಮಾಡಾಮೆ, ಕರ್ಪೆ ಗ್ರಾಮದ ಕರ್ಪೆ ಕುಟ್ಟಿಕಳ, ಕರ್ಪೆ ಗ್ರಾಮದ ಕರ್ಪೆ ಸಮಾಜ ಮಂದಿರ, ಪುದು ಗ್ರಾಮ ಕುಂಪನಮಜಲು 2 ಅಂಗನವಾಡಿ ಸಹಾಯಕಿ ಹುದ್ದೆಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಆಸಕ್ತ ಅಭ್ಯರ್ಥಿಗಳು ತಾತ್ಕಲಿಕ ಪಟ್ಟಿಯನ್ನು ಪರಿಶೀಲಿಸಿ ಆಯ್ಕೆ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸೆಪ್ಟಂಬರ್ 20 ರೊಳಗೆ ಲಿಖಿತವಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಂಟ್ವಾಳ ಇವರಿಗೆ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.
 
 
ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಂಗಳೂರು ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ 5 ಸಹಾಯಕಿಯರು ಮತ್ತು 1 ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಡ್ಡೂರು ಗ್ರಾಮದ ಮಾಣ್ಯಾಬೆಟ್ಟು ಕೇಂದ್ರದ ಕಾರ್ಯಕರ್ತೆ, ಪಣಪಿಲ ಗ್ರಾಮ ಪಣಪಿಲ ಕೇಂದ್ರ,ಕಲ್ಲಮುಂಡ್ಕೂರು ಗ್ರಾಮದ ಕಳಸಬೈಲು ಕೇಂದ್ರ, ಪುತ್ತಿಗೆ ಗ್ರಾಮ ಗುಡ್ಡೆಯಂಗಡಿ ಕೇಂದ್ರ,ಪುತ್ತಿಗೆ ಗ್ರಾಮದ ಪುತ್ತಿಗೆ ಕೇಂದ್ರ,ಉಳ್ಳಾಲ ಗ್ರಾಮದ ಮೊಗವೀರ ಪಟ್ನ ಕೇಂದ್ರಗಳ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆಸಕ್ತ ಅಭ್ಯರ್ಥಿಗಳು ತಾತ್ಕಲಿಕ ಪಟ್ಟಿಯನ್ನು ಪರಿಶೀಲಿಸಿ ಆಯ್ಕೆ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸೆಪ್ಟಂಬರ್ 20 ರೊಳಗೆ ಲಿಖಿತವಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಳೂರು ಇವರಿಗೆ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.
 
 
ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ ತಾತ್ಕಲಿಕ ಪಟ್ಟಿ
ಮಂಗಳೂರು ಶಿಶು ಅಭಿವೃದ್ಧಿ ಯೋಜನೆಯಲ್ಲಿ ತೆರವಾಗಿರುವ ಅಂಗನವಾಡಿ ಕೇಂದ್ರಗಳು ಶಾಂತಿನಗರ 2, ವಾರ್ಡ್ ಸಂಖ್ಯೆ 53, ಬಜಾಲ್ ಗ್ರಾಮದ ಕಾರ್ಯಕರ್ತೆ ಹಾಗೂ ಪದವು ಫ್ರೆಂಡ್ಸ್ ಕ್ಲಬ್ ಶಕ್ತಿನಗರ, ವಾರ್ಡ್ ಸಂಖ್ಯೆ 21, ಪದವು ಗ್ರಾಮ ಜಯನಗರ, ವಾರ್ಡ್ ಸಂಖ್ಯೆ 53 ಬಜಾಲ್ ಗ್ರಾಮ, ಟೊರ್ಪೆಡೋಸ್, ವಾರ್ಡ್ ಸಂಖ್ಯೆ 8, ಹೊಸಬೆಟ್ಟು ಗ್ರಾಮ ಫ್ರೆಂಡ್ಸ್ ಸರ್ಕಲ್ 3ನೇ ವಿಭಾಗ ಕಾಟಿಪಳ್ಳ, ವಾರ್ಡ್ ಸಂಖ್ಯೆ 3, ಕಾಟಿಪಳ್ಳ ಆನಂದನಗರ ಆಕಾಶಭವನ, ವಾರ್ಡ್ ಸಂಖ್ಯೆ 18 ಕಾವೂರು ಗ್ರಾಮಗಳ ಸಹಾಯಕಿಯರ ತಾತ್ಕಲಿಕ ಆಯ್ಕೆ ನಡೆದಿದ್ದು, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು. ಆಯ್ಕೆ ಪಟ್ಟಿಯಲ್ಲಿ ಆಕ್ಷೇಪಣೆಗಳಿದ್ದಲ್ಲಿ ಸೆಪ್ಟಂಬರ್ 20 ರ ಅಪರಾಹ್ನ 5.30ರ ಒಳಗಾಗಿ ಮಂಗಳೂರು(ನಗರ) ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಿಲ್ವ ಕ್ರಾಸ್ ರೋಡ್, ವೆಲೆನ್ಸಿಯಾ, ಬಿಷಪ್ ವಿಕ್ಟರ್ ಅಡ್ಡರಸ್ತೆ, ಮಂಗಳೂರು ಇವರನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here