ಹೀರೆಕಾಯಿ ತೊವ್ವೆ

0
875

ವಾರ್ತೆ ರೆಸಿಪಿ:
ಬೇಕಾಗುವ ಸಾಮಗ್ರಿ:
ಸಿಪ್ಪೆ ತೆಗೆದು ಹೆಚ್ಚಿದ ಹೀರೆಕಾಯಿ ಒಂದು ಕಪ್, ಅರ್ಧ ಕಪ್ ಹೆಸರುಬೇಳೆ, ಸಣ್ಣಗೆ ಹೆಚ್ಚಿದ ಟೊಮೆಟೊ ಒಂದು, ಉದ್ದಕ್ಕೆ ಸೀಳಿದ ಮೂರು ಹಸಿಮೆಣಸು, ಕತ್ತರಿಸಿದ ಒಂದು ಇಂಚು ಶುಂಠಿ, ಅರ್ಧ ಲಿಂಬೆಹಣ್ಣು, ಚಿಟಿಕೆ ಅರಿಶಿನ, ಒಗ್ಗರಣೆಗೆ ಎಣ್ಣೆ , ಸಾಸಿವೆ, ಕೊತ್ತೊಂಬರಿ, ಕರಿಬೇವು, ಉಪ್ಪು.
 
 
 
ತಯಾರಿಸುವ ವಿಧಾನ:
ಹೆಸರುಬೇಳೆ ತೊಳೆದು, ಅರಿಸಿನ, ಒಂದು ಚಮಚ ಎಣ್ಣೆ ಸೇರಿಸಿ ಬೇಯಿಸಿ. ಇದು ಬೆಂದ ನಂತರ ಹೆಚ್ಚಿದ ಹೀರೆಕಾಯಿ ಹೋಳು, ಟೊಮೆಟೊ ಸೇರಿಸಿ ಕುದಿಸಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿಕೊಂಡು ಸಾಸಿವೆ, ಹಸಿಮೆಣಸು, ಶುಂಠಿಯ ಚೂರು, ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ. ಇದನ್ನು ಕುದಿಸಿಟ್ಟ ಹೆಸರುಬೇಳೆ ಮತ್ತು ಹೀರೆಕಾಯಿ ಮಿಶ್ರಣಕ್ಕೆ ಸೇರಿಸಿ. ನಂತರ ಇದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಲಿಂಬೆರಸವನ್ನು ಸೇರಿಸಿ ಬಡಿಸಿ.

LEAVE A REPLY

Please enter your comment!
Please enter your name here