ಹಿರಿಯ ನಟ ಚೇತನ್ ರಾಮ್ ಇನ್ನಿಲ್ಲ

0
297

ಸಿನಿ ಪ್ರತಿನಿಧಿ ವರದಿ
ಹಿರಿಯ ನಟ ಚೇತನ್ ರಾಮ್ ರಾವ್ (76)ವಿಧಿವಶರಾಗಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಇವರು 2 ವರ್ಷದಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು.
 
 
 
ಮೃತರು ಮೂವರು ಹೆಣ್ಣು ಮಕ್ಕಳು, ಪತ್ನಿ, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಚೇತನ್ ರಾಮ್ ಅವರು ಕನ್ನಡದಲ್ಲಿ 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಖ್ಯಾತ ನಟರಾದ ಡಾ.ರಾಜ್ ಕುಮಾರ್, ವಿಷ್ಣುವರ್ಧನ್,ಅಂಬರೀಶ್ ಸೇರಿ ಹಲವು ನಟರ ಜೊತೆ ಅಭಿನಯಿಸಿದ್ದಾರೆ.
 
 
 
ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಕಲಾದ್ರೋಣ, ನಟ ಚತುರ, ಕಲಾಭೀಷ್ಮ, ಕಲಾ ರತ್ನ ಪ್ರಶಸ್ತಿಗಳು ಅವರ ಮುಡಿಗೇರಿವೆ.
 
 
 
ಮೈಸೂರಿನ ಟಿ ಕೆ ಲೇಔಟ್ ಮನೆಯಲ್ಲಿ ಚೇತನ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಾಮುಂಡಿಬೆಟ್ಟ ತಪ್ಪಲಿನ ರುದ್ರಭೂಮಿಯಲ್ಲಿ ಅತ್ಯಕ್ರಿಯೆ ನಡೆಯಲಿದೆ.

LEAVE A REPLY

Please enter your comment!
Please enter your name here