ಹಿರಿಯ ನಟ ಓಂಪುರಿ ಇನ್ನಿಲ್ಲ

0
284

ಬ್ರೇಕಿಂಗ್ ನ್ಯೂಸ್
ಬಾಲಿವುಡ್ ಖ್ಯಾತ ಹಿರಿಯ ನಟ ಓಂಪುರಿ(66) ವಿಧಿವಶರಾಗಿದ್ದಾರೆ.  ಮುಂಬೈನ ಸ್ವಗೃಹದಲ್ಲಿ  ಹೃದಯಾಘಾತದಿಂದ ಹಿರಿಯ ನಟ ಓಂಪುರಿ ಕೊನೆಯುಸಿರೆಳೆದಿದ್ದಾರೆ. 1950 ಅಕ್ಟೋಬರ್ 18ರಂದು ಹರಿಯಾಣದ ಅಂಬಾಲದಲ್ಲಿ ಇವರು ಜನಿಸಿದ್ದರು.
 
 
ಬಾಲಿವುಡ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಿದ್ದರು. ಇವರು ನೂರಾರು ಸಿನೆಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ಹಿಂದಿ, ಫ್ರೆಂಚ್ ಸೇರಿ ಭಾರತದ 6 ಭಾಷೆಗಳಲ್ಲಿ ನಟಿಸಿದ್ದು, ಬಾಲಿವುಡ್ ಹಾಲಿವುಡ್ ಚಿತ್ರಗಳಲ್ಲಿ ನಟಿಸಿ ಸೈ ಎಸಿನಿಕೊಂಡಿದ್ದರು. ಪಾಕಿಸ್ತಾನಿ ಸಿನೆಮಾಗಳಲ್ಲಿ ಇವರು ನಟಿಸಿದ್ದಾರೆ.
 
 
 
1999ರಲ್ಲಿ ನಟ ಶಿವರಾಜ್ ಕುಮಾರ್ ಅಭಿನಯದ ಕನ್ನಡದ 50ನೇ ಎಕೆ-47 ಚಿತ್ರದಲ್ಲಿ ವಿಶೇಷ ಪಾತ್ರ ವಹಿಸಿದ್ದರು. ಅಲ್ಲದೆ ಸಂತೆಯಲ್ಲಿ ನಿಂತ ಕಬೀರ, ಟೈಗರ್, ಧ್ರುವ, ತಬ್ಬಲಿ ನೀನಾದೆ ಮಗನೇ ಸೇರಿ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಚಿತ್ರಗಳಲ್ಲಿ ಸ್ವತಃ ಅವರೇ ಕಂಠದಾನ ಮಾಡುತ್ತಿದ್ದರು. ಇದರಿಂದ ಓಂಪುರಿ ಅವರು ಪಂಚಿನ ಕಂಠ ಎಂದೇ ಪ್ರಸಿದ್ಧಿ ಹೊಂದಿದ್ದರು.
 
 
 
ಇವರು 1976ರಲ್ಲಿ ಬಿಡುಗಡೆಯಾದ ಮರಾಠಿ ಸಿನಿಮಾ ಘಾಷಿರಾಮ್ ಕೊತ್ವಾಲ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಭವಾನಿ ಭವಾಯಿ(1980), ಸದ್ಗತಿ(1981), ಅರ್ಧ್ ಸತ್ಯ(1982), ಮಿರ್ಚ್ ಮಸಾಲಾ(1986, ಧಾರಾವಿ(1992)ಸೇರಿದಂತೆ ಹಲವು ಕಲಾತ್ಮಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 40 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು. ನಸೀರುದ್ದೀನ್ ಷಾ, ಶಬಾನಾ ಅಜ್ಮಿ ಹಾಗೂ ಸ್ಮಿತಾ ಪಾಟೀಲ್ ಅವರೊಂದಿಗೆ ಓಂ ಪುರಿ ಅವರು ನಟಿಸಿದ್ದಾರೆ. 1980ರ ದಶಕದಲ್ಲಿ ಛನ್ ಪರದೇಶಿ(1980)ಓಂಪುರಿ ಬಹಳಷ್ಟು ಯಶಸ್ವಿಯಾಗಿದೆ.ಲಾಂಗ್ ದಾ ಲಿಷ್ಕಾರಾ(1986) ಎಂಬ ಎರಡು ಪಂಜಾಬಿ ಚಲನಚಿತ್ರಗಳಲ್ಲಿ ನಟಿಸಿದ್ದರು. ಈಸ್ಟ್ ಈಸ್ ಈಸ್ಟ್ ಎಂಬ ಇಂಗ್ಲಿಷ್ ಚಲನಚಿತ್ರದಲ್ಲಿಯೂ ನಟಿಸಿದ್ದಾರೆ.
 
 
 
ಇವರು ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ಭಾರತ ಸರ್ಕಾರದ ‘ಪದ್ಮಶ್ರೀ’ ಗೌರವಕ್ಕೆ ಭಾಜನರಾಗಿದ್ದರು. ಇದಲ್ಲದೇ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 2 ಬಾರಿ ರಾಷ್ಟ್ರೀಯ ಪ್ರಶಸ್ತಿ, 6 ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ. 5 ಅಂತಾರಾಷ್ಟ್ರೀಯ ಪ್ರಶಸ್ತಿಗೆ ಓಂಪುರಿ ಅವರು ಭಾಜನರಾಗಿದ್ದಾರೆ.

LEAVE A REPLY

Please enter your comment!
Please enter your name here