ಹಿರಿಯ ಗೃಹರಕ್ಷಕರಿಗೆ ಸನ್ಮಾನ

0
245

ಮ0ಗಳೂರು ಪ್ರತಿನಿಧಿ ವರದಿ
ಮಂಗಳೂರು ಘಟಕದ ಹಿರಿಯ ಗೃಹರಕ್ಷಕರಾಗಿದ್ದು ಗೃಹರಕ್ಷಕದಳದಲ್ಲಿ 30 ವರ್ಷಗಳ ಸೇವೆ ಸಲ್ಲಿಸಿರುವ ಭಾಸ್ಕರ್ ವರಿಗೆ ಘಟಕದಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.
 
 
ಜಿಲ್ಲಾ ಕಮಾಂಡೆಂಟ್ ಡಾ: ಮುರಲೀ ಮೋಹನ ಚೂಂತಾರು, ಜಿಲ್ಲಾ ಉಪಸಮಾದೇಷ್ಟರಾದ ರಮೇಶ್, ಗೃಹರಕ್ಷಕ ಅಧಿಕಾರಿಗಳಾದ ಅಭಿಮನ್ಯು ರೈ, ಸುರೇಶ್ ಶೇಠ್, ಗೃಹರಕ್ಷಕರು ಹಾಗೂ ಗೃಹರಕ್ಷಕಿಯರು ಭಾಗವಹಿಸಿದ್ದರು.
 
 
ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾಸ್ಕರ್ ಅವರು ಯಾವುದೇ ಫಲಾಪೇಕ್ಷೆಯಿಲ್ಲದೆ ನಿಷ್ಕಾಮದಿಂದ ಸಮಾಜಸೇವೆ ಮಾಡಿ ಎಂದು ಹೊಸದಾಗಿ ಸೇರ್ಪಡೆಗೊಂಡ ಗೃಹರಕ್ಷಕರಿಗೆ ಕಿವಿಮಾತು ಹೇಳಿದರು. ಗುಂಪುಗಾರಿಕೆ, ಒಳಜಗಳ ಸ್ವಪ್ರತಿಷ್ಟೆಗಳನ್ನು ಬದಿಗೊತ್ತಿ ಸದಾಕಾಲ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವಲ್ಲಿ ಮಾತ್ರ ಮಾನವೀಯ ಮೌಲ್ಯಗಳಿಗೆ ಅರ್ಥಬಂದು ಉತ್ತಮ ಗೃಹರಕ್ಷಕರಗಾಲು ಸಾಧ್ಯ ಎಂದು ಕರೆ ನೀಡಿದರು.

LEAVE A REPLY

Please enter your comment!
Please enter your name here