ರಾಷ್ಟ್ರೀಯ ಪ್ರತಿನಿಧಿ ವರದಿ
ಜಮ್ಮುಕಾಶ್ಮೀರದ ಸೋನಮಾರ್ಗ್ ನಲ್ಲಿರುವ ಸೇನಾಕ್ಯಾಂಪ್ ಮೇಲೆ ಹಿಮಬಂಡೆಕುಸಿತ ದುರಂತದಲ್ಲಿ ಕರ್ನಾಟಕ ಹಾಸನದ ಯೋಧ ಸಂದೀಪ್ ಕುಮಾರ್ ಸೇರಿ 15 ಮಂದಿ ಹುತಾತ್ಮರಾಗಿದ್ದಾರೆ. ಜನವರಿ 25ರ ಬೆಳಗ್ಗೆ ಜಮ್ಮುಕಾಶ್ಮೀರದ ಗುರೇಜ್ ಸೆಕ್ಟರ್ ನ ಸೇನಾ ಕ್ಯಾಂಪ್ ಮೇಲೆ ಹಿಮಕುಸಿದಿತ್ತು.
ಹಿಮಕುಸಿತ ದುರಂತದಲ್ಲಿ ಮೃತಪಟ್ಟ ಸೇನಾ ಯೋಧರ ವಿವರ:
ಮಹಾರಾಷ್ಟ್ರ ಮೂಲದ ಯೋಧ ಆನಂದ್ ಗವಾಯಿ, ಉತ್ತರಪ್ರದೇಶ ಮೂಲದ ಯೋಧ ಅಜಾದ್ ಸಿಂಗ್, ಮಧ್ಯಪ್ರದೇಶ ಮೂಲದ ದೇವೇಂದರ್ ಕುಮಾರ್ ಸೋನಿ, ತಮಿಳುನಾಡು ಮೂಲದ ಯೋಧ ಬಿ ಎಲವರಸನ್, ಆಂಧ್ರ ಪ್ರದೇಶ ಮೂಲದ ಯೋಧ ಮಾಮಿಡಿ ನಾಗರಾಜು, ಮಹಾರಾಷ್ಟ್ರ ಮೂಲದ ಯೋಧ ಸಮುಂದರೆ ವಿಕಾಸ್, ಮಹಾರಾಷ್ಟ್ರ ಮೂಲದ ಯೋಧ ಸಂಜುಸುರೇಶ್ ಖಂಡ್ರೆ, ತಮಿಳುನಾಡು ಮೂಲದ ಯೋಧ ಸುಂದರ್ ಪಾಂಡಿ, ಗುಜರಾತ್ ಮೂಲದ ಯೋಧ ಸುನಿಲ್ ಪಟೇಲ್, ಹರಿಯಾಣ ಮೂಲದ ಯೋಧ ಅಂಕುರ್ ಸಿಂಗ್ ಸೇರಿ 15 ಮಂದಿ ಹುತಾತ್ಮರಾಗಿದ್ದಾರೆ.