ಹಿಮಕುಸಿತಕ್ಕೆ ಹಾಸನದ ಯೋಧ ಬಲಿ

0
259

ರಾಷ್ಟ್ರೀಯ ಪ್ರತಿನಿಧಿ ವರದಿ
ಜಮ್ಮುಕಾಶ್ಮೀರದಲ್ಲಿ ಸೇನಾಕ್ಯಾಂಪ್ ಮೇಲೆ ಹಿಮಕುಸಿತ ಪ್ರಕರಣದಲ್ಲಿ ಹಾಸನದ ಯೋಧರೊಬ್ಬರು ಸಾವನ್ನೊಪ್ಪಿದ್ದಾರೆ. ಹಿಮದಡಿ ಸಿಲುಕಿ ಹಾಸನದ ಶಾಂತಿಗ್ರಾಮ ಹೋಬಳಿ ದೇವಿಹಳ್ಳಿಯ ನಿವಾಸಿ 28 ವರ್ಷದ ಸಂದೀಪ್ ಅಸುನೀಗಿದ್ದಾರೆ.
 
 
ಫೆಬ್ರವರಿ 22ರಂದು ಸಂದೀಪ್ ವಿವಾಹ ನಡೆಯಬೇಕಾಗಿತ್ತು. ಹಸೆಮಣೆ ಏರಬೇಕಿದ್ದ ಯೋಧನನ್ನು ಹಿಮ ಬಲಿಪಡೆದಿದೆ. ಸಂದೀಪ್ ಸಾವಿನಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
 
 
ಜನವರಿ 25ರ ಬೆಳಗ್ಗೆ ಜಮ್ಮುಕಾಶ್ಮೀರದ ಗುರೇಜ್ ಸೆಕ್ಟರ್ ನ ಸೇನಾ ಕ್ಯಾಂಪ್ ಮೇಲೆ ಹಿಮಕುಸಿದಿತ್ತು. ಹಿಮದಡಿ ಸಿಲುಕಿ 14 ಯೋಧರು ಹುತಾತ್ಮರಾಗಿದ್ದಾರೆ. ಇವರಲ್ಲಿ ನಾಲ್ವರು ಯೋಧರ ಶವವನ್ನು ಹಿಮರಾಶಿಯಿಂದ ಹೊರತೆಗೆಯಲಾಗಿದೆ.

LEAVE A REPLY

Please enter your comment!
Please enter your name here