ಹಿಂಡಲಗಾ ಜೈಲಿಗೆ ಸೈನೆಡ್ ಮಲ್ಲಿಕಾ ಶಿಫ್ಟ್

0
668

ಬೆಂಗಳೂರು ಪ್ರತಿನಿಧಿ ವರದಿ
ಸೈನೆಡ್ ಮಲ್ಲಿಕಾಳನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಶಶಿಕಲಾ ನಟರಾಜನ್ ಗೆ ಹೆಚ್ಚಿನ ಭದ್ರತೆ ಹಿನ್ನೆಲೆಯಲ್ಲಿ ಸೈನೆಡ್ ಮಲ್ಲಿಕಾಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬೆಳಗಾವಿಗೆ ಶಿಫ್ಟ್ ಮಾಡಲಾಗಿದೆ.
 
 
 
ಕಳೆದ 3 ದಿನಗಳ ಹಿಂದೆಯೇ ಬೆಳಗಾವಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಮಲ್ಲಿಕಾ, ಶಶಿಕಲಾ ಇದ್ದ ಪಕ್ಕದ ಬ್ಯಾರೆಕ್ ನಲ್ಲಿದ್ದಳು. ಈ ಮೊದಲು ಸೈನೆಡ್ ಮಲ್ಲಿಕಾ ಹಿಂಡಲಗಾ ಜೈಲಿನಲ್ಲಿದ್ದಳು. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕರೆತರಲಾಗಿತ್ತು. ಸೈನೆಡ್ ಮಲ್ಲಿಕಾ ಸೈನೆಡ್ ಹಾಕಿ ಹಲವರನ್ನು ಹತ್ಯೆಗೈದಿದ್ದರು.

LEAVE A REPLY

Please enter your comment!
Please enter your name here