ಮ0ಗಳೂರು ಪ್ರತಿನಿಧಿ ವರದಿ
ದಕ್ಷಿಣ ಕನ್ನಡ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಅಡುಗೆಯವರು/ಅಡುಗೆಸಹಾಯಕರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿಮಾಡಲು ಆನ್ ಲೈನ್ ಮೂಲಕ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆನ್ ಲೈನ್ ಅರ್ಜಿ ಸಲ್ಲಿಸಲು ಅಕ್ಟೋಬರ್ 25ರಿಂದ ಪ್ರಾರಂಭವಾಗಲಿದ್ದು, ನವಂಬರ್ 19 ಕೊನೆಯ ದಿನಾಂಕ. ಅಭ್ಯರ್ಥಿಯು ಎರಡು ಹುದ್ದೆಗೊ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದಾದಲ್ಲಿ ಆಯಾ ಹುದ್ದೆಗಳಿಗೆ ನಿಗದಿಪಡಿಸಿರುವ ಅರ್ಜಿ ಶುಲ್ಕವನ್ನು ಪ್ರತ್ಯೆಕವಾಗಿ ಪಾವತಿಸಬೇಕು.
ಅರ್ಜಿ ಶುಲ್ಕವನ್ನು ಕರ್ನಾಟಕದ ಯಾವುದೇ ಎಲೆಕ್ಟ್ರಾನಿಕ್ ಅಂಚೆ ಕಛೇರಿಗಳಲ್ಲಿ ನಿಗಧಿಪಡಿಸಿರುವ ದಿನಾಂಕದೊಳಗೆ ಪಾವತಿಸಬೇಕು. ನೇಮಕಾತಿ ಮೀಸಲಾತಿ ಹಾಗೂ ನೇಮಕಾತಿ ಮಾನದಂಡಗಳ ಕುರಿತು ಮತ್ತು ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು www.dk.nic.in ಪರಿಶೀಲಿಸಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.