ಹಾಸಿಗೆ ಹಿಡಿಯಿತು ಆಧಾರ ಸ್ತಂಭ 

0
243

ಮಾನವೀಯ ಸ್ಪಂದನೆಯ ನಿರೀಕ್ಷೆಯಲ್ಲಿ
ಶ್ಯಾಮಪ್ರಸಾದ ಸರಳಿ – (ಕುಂಬ್ಡಾಜೆ)
10 ತಿಂಗಳಿನ ಪುಟ್ಟ ಗಂಡು ಮಗುವನ್ನು ಎತ್ತಿ ಆಡಿಸಬೇಕಾದ, ಮನೆಯ ಆಧಾರ ಏಕೈಕ ಸ್ತಂಭವಾದ ಪ್ರಶಾಂತ್ ಕಳೆದ ಎಂಟು ತಿಂಗಳಿನಿಂದ ಮನೆಯಲ್ಲಿ ಹಾಸಿಗೆ ಹಿಡಿದ ಸ್ಥಿತಿಯಲ್ಲಿ ನರಕ ಯಾತನೆ ಅನುಭವಿಸುತ್ತಾದ್ದಾರೆ. ಕುಂಬಡಾಜೆ ಗ್ರಾಮ ಪಂಚಾಯತಿನ 3ನೇ ವಾರ್ಡ್ ಮಣ್ಣಾಪು ನಿವಾಸಿಯಾದ ಅಟೋಡ್ರೈವರ್  ವೃತ್ತಿಯನ್ನು ನಿರ್ವಹಿಸಿಕೊಂಡು ಬಂದಿದ್ದ ಕುಂಬರಾಜೆ ಎಂಬವರ ಏಕೈಕ ಪುತ್ರ ಪ್ರಶಾಂತ್ (28) ಕಳೆದ ಎಂಟು ತಿಂಗಳಿಂದ ತನ್ನ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ.

ಅಸಹಾಯಕ ಸ್ಥಿತಿಯಲ್ಲಿ ಪ್ರಶಾಂತ್
ಅಸಹಾಯಕ ಸ್ಥಿತಿಯಲ್ಲಿ ಪ್ರಶಾಂತ್

5 ಮಂದಿಯ ಇಡೀ ಕುಟುಂಬವೇ ಅಸೌಖ್ಯದಿಂದ ಕೂಡಿದೆ. ಎರಡು ಜನ ಅಕ್ಕಂದಿರು 5 ವರ್ಷ ಮೊದಲು ಇದೇ ಸಮಸ್ಯೆಯಿಂದ ಇಹಲೋಕವನ್ನು ತ್ಯಜಿಸಿರುತ್ತಾರೆ. ತಂದೆಯ ಆರೋಗ್ಯವೂ ಹದಗೆಟ್ಟಿದೆ. ಅಸೌಖ್ಯದ ನಡುವೆಯೂ ತಾಯಿ ಕೂಲಿ ಕೆಲಸ ಮಾಡಿ ಸ್ವಲ್ಪ ಹಣವನ್ನು ಸಂಪಾದಿಸಿದರೂ ಅದು ಔಷಧಿ ವೆಚ್ಚಕ್ಕೂ ಸಾಕಾಗುವುದಿಲ್ಲ.  ವಾರಕ್ಕೆ ಮೂರು ಸಲ ಡಯಾಲಿಸಿಸ್ ಮಾಡಬೇಕೆಂದು ವೈದ್ಯರು ಸಲಹೆ ಇತ್ತ ಮೇರೆಗೆ ಈಗಾಗಲೇ ಅನೇಕ ಹಣವನ್ನು ವ್ಯಯಿಸಲಾಗಿದೆ. ಇನ್ನು ನಾಳೆ ಹೇಗೆ ಎಂಬ ಚಿಂತೆಯಲ್ಲಿ ದಿನದೂಡುತ್ತಿದ್ದಾರೆ. ಬಡ ಕುಟುಂಬದ ಇತರ ಸದಸ್ಯರು ಹಾಗೂ ಬಂಧುಗಳು ತಮ್ಮಿಂದಾದ ಸಹಾಯವನ್ನು ಮಾಡುತ್ತಿದ್ದರೂ ಅದು ಸಾಕಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪಕ್ಷಬೇಧ ಮರೆತು, ಜಾತಿ ಮತ ಮರೆತು ಊರಿನ ಕೆಲವರು ತಮ್ಮಿಂದಾದ ಸಹಕಾರ ನೀಡಿರುತ್ತಾರೆ.
ಮುಂದಿನ ಚಿಕಿತ್ಸೆಯ ವೆಚ್ಚವನ್ನು ಭರಿಸುವುದು ತಮ್ಮಿಂದ ಅಸಾಧ್ಯ ಎಂದು ತಂದೆ ಕುಂಬರಾಜೆಯವರು ತಿಳಿಸಿರುತ್ತಾರೆ. ದಾನಿಗಳು ಸಹಕಾರ ನೀಡಿದಲ್ಲಿ ಮಾತ್ರ ಚಿಕಿತ್ಸೆಯನ್ನು ಮುಂದುವರಿಸಬಹುದಾಗಿದೆ.  ಆದುದರಿಂದ ಕುಟುಂಬದ ಕರುಣಾಜನಕ ಸ್ಥಿತಿಯನ್ನು ಮನಗಂಡು ಸಂಘಸಂಸ್ಥೆಗಳು, ದಾನಿಗಳು ಸಹಕಾರ ನೀಡಬೇಕೆಂದು ಈ ಮೂಲಕ ಅವಲತ್ತುಕೊಳ್ಳುತ್ತಿದ್ದಾರೆ. ಸಂಚಾರವಾಣಿ ಸಂಖ್ಯೆ : 9847897381.
ಬ್ಯಾಂಕ್ ಖಾತೆ: ನಾರ್ತ್ ಮಲಬಾರ್ ಗ್ರಾಮೀಣ ಬ್ಯಾಂಕ್, ಜಯನಗರ ಶಾಖೆ, ಮಾರ್ಪನಡ್ಕ
ಖಾತೆದಾರನ ಹೆಸರು : ರಾಮ ಕೆ.
ಖಾತೆ ನಂಬ್ರ : 40413100007247, ಐ ಎಫ್ ಎಸ್ ಸಿ ಕೋಡ್ : ಕೆಎಲ್ಜಿಬಿ004041

LEAVE A REPLY

Please enter your comment!
Please enter your name here