ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ

0
575

ಹಾಸನ ಪ್ರತಿನಿಧಿ ವರದಿ
ಹಾಸನದ ಅಧಿದೇವತೆ ದೇಗುಲ ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ವರ್ಷಕ್ಕೊಮೆ ದೇಗುಲವ ಬಾಗಿಲು ತೆರೆಯುವುದು ಇಲ್ಲಿನ ವಿಶೇಷವಾಗಿದೆ. ಇದರಿಂದ ಹಾಸನಾಂಬೆ ಭಕ್ತರಿಗೆ ವರ್ಚಕ್ಕೊಮ್ಮೆ ಮಾತ್ರ ದರ್ಶನ ನೀಡುತ್ತಾಳೆ.
 
 
ಇಂದಿನಿಂದ ಅ 31 ರವರೆಗೆ ಭಕ್ತರಿಗೆ ದೇವಿಯ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಇಂದು ಮಧ್ಯಾಹ್ನ 12.44ಕ್ಕೆ ಸರಿಯಾಗಿ ದೇವಾಲಯದ ಪ್ರಧಾನ ಅರ್ಚಕರು ಗರ್ಭಗುಡಿಯ ಬಾಗಿಲು ತೆರೆಯಲಿದ್ದಾರೆ. ಪ್ರತಿವರ್ಷ ಆಶ್ವಿಜಾ ಮಾಸದ ಪೂರ್ಣಿಮೆಯ ನಂತರ ಬರುವ ಮೊದಲ ಗುರುವಾರದಂದು ದೇವಿಯ ಬಾಗಿಲು ತೆರೆಯಲಾಗುತ್ತದೆ.
 
 
ಆದರೆ ಮೊದಲ ದಿನ ಯಾವುದೇ ಭಕ್ತರಿಗೆ ದರ್ಶನ ಭಾಗ್ಯವಿಲ್ಲ. ಇಂದು ದೇವಿಯ ದರ್ಶನ ಮಾಡಿದರೆ ಅಪಾಯವಾಗುತ್ತೆ ಅನ್ನೋ ನಂಬಿಕೆ ಜನರದ್ದು. ಹಾಗಾಗಿ ತಳವಾರ ವಂಶಸ್ಥರ ಕುಟುಂಬದವರಾದ ನರಸಿಂಹರಾಜೇ ಅರಸ್ ದೇವಾಲಯದ ಮುಂಭಾಗದಲ್ಲಿ ಬಾಳೆಕಂಬವನ್ನು ಕಡಿಯುವ ಮೂಲಕ ದರ್ಶನಕ್ಕೆ ಅನುವು ಮಾಡಿಕೊಡ್ತಾರೆ.  ನಾಳೆ ಬೆಳಗ್ಗೆ 6 ಗಂಟೆಯಿಂದ ದೇವರ ದರ್ಶನಕ್ಕೆ ಅನುಮತಿ ನೀಡಲಾಗಿದೆ.
 
 
ಮುಂಜಾನೆ 6 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ದರ್ಶನ ನೀಡುವ ಹಾಸನಾಂಬ ಮತ್ತೆ ಮಧ್ಯಾಹ್ನ 2. ರಿಂದ ರಾತ್ರಿ 10.30ರ ತನಕ ದರ್ಶನಕ್ಕೆ ಅವಕಾಶವಿರುತ್ತದೆ. ಬಲಿಪಾಡ್ಯಮಿಯ ಮಾರನೇ ದಿನ ಜಿಲ್ಲಾಡಳಿತದ ಸಮ್ಮುಖದಲ್ಲಿ ಬಾಗಿಲನ್ನು ಶಾಸ್ತ್ರೋಕವಾಗಿ ಹಾಕಲಾಗುತ್ತದೆ.
 
 
ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ವಿವಿಧೆಡೆಯಿಂದ ಭಕ್ತಾಧಿಗಳು ಆಗಮಿಸಿದ್ದಾರೆ. ಭಕ್ತಾದಿಗಳಿಗೆ ದರ್ಶಕ್ಕೆ ಯಾವುದೇ ಅಡಚಣೆಯಾಗದಂತೆ ಜಿಲ್ಲಾಡಳಿತ ಸರ್ವ ರೀತಿಯಲ್ಲಿಯೂ ಸಜ್ಜಾಗಿದೆ. ಇದರಿಂದ ದೇವಸ್ಥಾನದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭದ್ರತೆಗೆ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
 

LEAVE A REPLY

Please enter your comment!
Please enter your name here