ಹಾವು ತಿಂದು ಪ್ರಾಣ ಬಿಟ್ಟ ಹುಲಿ

0
285

ಮೈಸೂರು ಪ್ರತಿನಿಧಿ ವರದಿ
ಹುಣಸೂರು ಅರಣ್ಯ ವಿಭಾಗದ ಆನೆಚೌಕುರು ರೇಂಜ್ ನ ಮುತ್ತುರಾಯನಸ್ವಾಮಿ ದೇವಸ್ಥಾನದ ಬಳಿ ಬುಧವಾರ ಮತ್ತೊಂದು ಹುಲಿಯ ಮೃತದೇಹ ಪತ್ತೆಯಾಗಿದೆ.
 
 
7ರಿಂದ 8 ವರ್ಷದ ಹುಲಿ ಒಂದು ರಸ್ಸೆಲ್ ಹಾವು ಮತ್ತೊಂದು ವಿಷಪೂರಿತ ಹಾವು ಸೇವಿಸಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮೈಸೂರು ಜಿಲ್ಲೆಯ ನಾಗರಹೊಳೆ ಅರಣ್ಯದ ಹುಲಿಕಾಲಬೆಟ್ಟದಲ್ಲಿ ವಯಸ್ಸಿನ ಕಾರಣದಿಂದ ನಿನ್ನೆಯಷ್ಟೇ 12 ವರ್ಷದ ಹುಲಿಯೊಂದು ಮೃತಪಟ್ಟಿತ್ತು. ಎರಡು ದಿನಗಳಲ್ಲಿ ಮತ್ತೊಂದು ಹುಲಿ ಮೃತಪಟ್ಟಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
 
 
 
ಅಲ್ಲದೆ ಮರಣೋತ್ತರ ಪರೀಕ್ಷೆ ವೇಳೆ ಹುಲಿಯ ಹೊಟ್ಟೆಯಲ್ಲಿ ರಸ್ಸೆಲ್ ಹಾವು, ವಿಷಪೂರಿತ ಹಾವು, ಪ್ಯಾಂಗೋಲಿನ ಮೂಳೆಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here