ಹಸ್ತಾಂತರ ಗೊಂಡವು ಕಲಾಕೃತಿ

0
449

200ಕಲಾಕೃತಿ ಮರಳಿಸಿದ ಅಮೆರಿಕಾ
ಇದು ಮೋದಿ ಮೋಡಿಯೇ ಹೌದು…ಅದೆಷ್ಟೋ ವರುಷಗಳಿಂದ ಅಮೆರಿಕಾದಲ್ಲಿದ್ದ ಭಾರತದ 200ಕ್ಕೂ ಅಧಿಕ ಅತ್ಯಮೂಲ್ಯ ಕಲಾಕೃತಿಗಳನ್ನು ಅಮೆರಿಕಾ ಭಾರತಕ್ಕೆ ಹಿಂದಿರುಗಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉಪಸ್ಥಿತರಿದ್ದ ಸಮಾರಂಭದಲ್ಲಿ 67ಕೋಟಿಗೂ ಅಧಿಕ ಮೌಲ್ಯದ ಅತ್ಯಪೂರ್ವ 2000ವರ್ಷಕ್ಕೂ ಅಧಿಕ ಇತಿಹಾಸವನ್ನು ಹೊಂದಿರುವ ಕಲಾಕೃತಿಗಳನ್ನು ಭಾರತಕ್ಕೆ ಅಮೆರಿಕಾ ಹಿಂದಿರುಗಿಸಿತು. ತನ್ಮೂಲಕ ಭಾರತ ಹಾಗೂ ಅಮೆರಿಕಾ ನಡುವೆ ಒಂದು ಮಹತ್ವಪೂರ್ಣವಾದಂತಹ ಬಾಂಧವ್ಯ ಉಂಟಾದಂತಾಯಿತು.
ಈ ಕಲಾಕೃತಿಗಳನ್ನು ಹಣದಾಸೆಗಾಗಿ ಮಾರಾಟ ಮಾಡಿರಬಹುದು. ಆದರೆ ಇವೆಲ್ಲವೂ ನಮ್ಮ ಸಂಸ್ಕೃತಿ ಪರಂಪರೆಯ ಭಾಗ. ಇವುಗಳನ್ನು ಮರಳಿ ಭಾರತಕ್ಕೆ ಹಸ್ತಾಂತರಿಸಿದ್ದಕ್ಕಾಗಿ ಅಮೆರಿಕಾಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಪ್ರಧಾನಿ ಮೋದಿ ಈ ಸಂದರ್ಭ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here