ಹಸುಗಳಿಗೆ ದಯಾಮರಣ

0
342

ಬೆಂಗಳೂರು ಪ್ರತಿನಿಧಿ ವರದಿ
ಕೋಲಾರ ಶಾಸಕ ವರ್ತೂರು ಪ್ರಕಾಶ್ ಫಾರ್ಮ್ ನಲ್ಲಿರೋ ಹಸುಗಳಲ್ಲಿ ಕಾಯಿಲೆ ಕಾಣಿಸಿಕೊಂಡಿದೆ. ಹಸುಗಳಿಗೆ ಬ್ಲೂಸರ್ ಲೋಸಿಸ್ಕ್ ಕಾಯಿಲೆ ಪತ್ತೆಯಾಗಿರೋದು ದೃಢಪಟ್ಟಿದೆ.
 
ಈ ಹಿನ್ನೆಲೆಯಲ್ಲಿ ಪಶುಸಂಗೋಪನಾ ಸಚಿವ ಎ. ಮಂಜು ಅವರ ನೇತೃತ್ವದಲ್ಲಿ ಅಧಿಕಾರಿಗಳ ತುರ್ತು ಸಭೆ ಕರೆಯಲಾಗಿದೆ. ಬೆಂಗಳೂರಿನ ನಿವಾಸದಲ್ಲಿ ಅಧಿಕಾರಿಗಳ ಜೊತೆ ಸಚಿವರ ತುರ್ತು ಸಭೆ ಕರೆಯಲಾಗಿದೆ. ಸಭೆಯಲ್ಲಿ ಕಾಯಿಲೆಗೆ ತುತ್ತಾಗಿರುವ ಹಸುಗಳಿಗೆ ದಯಾಮರಣ ನೀಡಲು ನಿರ್ಧರಿಸಲಾಗಿದೆ.
 
 
998 ಹಸುಗಳ ಪೈಕಿ 49 ಹಸುಗಳಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಈ ಬ್ಯಾಕ್ಟೀರಿಯಾ ಹಸುವಿನಿಂದ ಮಾನವರ ಮೇಲೆ ಹರಡುತ್ತದೆ. ಈ ಹಿನ್ನೆಲೆಯಲ್ಲಿ ಕಾಯಿಲೆ ಇರುವ ಹಸುಗಳಿಗೆ ದಯಾಮರಣ ನೀಡಲು ಸಚಿವ ಎ ಮಂಜು ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here