ಹವ್ಯಕ ವಲಯ ಸಭ- ಗಿಡವಿತರಣೆ

0
321

 
ವರದಿ-ಚಿತ್ರ: ಶ್ಯಾಮ್ ಪ್ರಸಾದ್, ಬದಿಯಡ್ಕ
ಗೋಕರ್ಣಮಂಡಲಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಮುಳ್ಳೇರಿಯ ಮಂಡಲದ ಎಣ್ಮಕಜೆ ಹವ್ಯಕ ವಲಯದ ಸಭೆಯು ಆದಿತ್ಯವಾರ ಪೆರ್ಲದಲ್ಲಿರುವ ವಾಂತಿಚ್ಚಾಲು ನಾರಾಯಣ ಭಟ್ಟರ `ಶಿವಕೃಪಾ’ ಮನೆಯಲ್ಲಿ ಆದಿತ್ಯವಾರ ಜರಗಿತು.
 
 
 
ವಲಯ ಅಧ್ಯಕ್ಷ ಶಿವಪ್ರಸಾದ ವರ್ಮುಡಿ ಪ್ರಸ್ತಾವನೆ ಮಾತುಗಳನ್ನಾಡಿದರು. ಮಂಡಲ ಧರ್ಮಪ್ರಧಾನ ವೇದಮೂರ್ತಿ ಕೇಶವಪ್ರಸಾದ ಭಟ್ `ಆದಿತ್ಯ ಹೃದಯ’ ಪಠಣ ಹಾಗೂ ಪ್ರಯೋಜನವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಆಸಕ್ತರಿಗೆ ಉಪಯುಕ್ತ ಸಸ್ಯಗಳನ್ನು ವಿತರಿಸಲಾಯಿತು.
 
 
ವಲಯದ ಕಾರ್ಯಚಟುವಟಿಕೆಗಳನ್ನು ಅವಲೋಕಿಸಲಾಯಿತು. ಶ್ರೀಗಳವರ ಚಾತುರ್ಮಾಸ್ಯ ಹಾಗೂ ಗೋ ಸಂತ ಸಮಾವೇಶದ ಬಗ್ಗೆ ವಿವರಗಳನ್ನು ನೀಡಲಾಯಿತು. ವಲಯ ಪ್ರಸಾರ ಪ್ರಧಾನ ಶಂಕರ ಪ್ರಸಾದ ಕುಂಚಿನಡ್ಕ ವಂದಿಸಿದರು. ಶಂಖನಾದ, ಶಾಂತಿಮಂತ್ರದೊಂದಿಗೆ ಸಭೆ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here