ಹವ್ಯಕ ಮಹಾ ಮಂಡಲ ಸಭೆ

0
176

 
ವರದಿ-ಚಿತ್ರ: ಗೋವಿಂದ ಬಿಜಿ
ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಹವ್ಯಕ ಮಹಾ ಮಂಡಲ ಸಭೆಯು ಕಳೆದ ಆದಿತ್ಯವಾರ ಶ್ರೀ ರಾಮಚಂದ್ರಾಪುರ ಮಠ, ಬೆಂಗಳೂರಿನಲ್ಲಿ ರಾಮಾಶ್ರಮದಲ್ಲಿ ಜರಗಿತು.
 
 
 
ಗುರುವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು. ಈಶ್ವರಿ ಬೇರ್ಕಡವು ಅಧ್ಯಕ್ಷಸ್ಥಾನ ವಹಿಸಿ ಮಹಾಮಂಡಲದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿಗಳನ್ನಿತ್ತರು. ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪು ಅವರು ವಿವಿಧ ವಿಭಾಗಗಳ ಕಾರ್ಯವೈಖರಿಗಳನ್ನು ಜಾರಿಗೊಳಿಸುವ ವ್ಯವಸ್ಥೆಗಳ ಕುರಿತು ಸಮಗ್ರ ಮಾಹಿತಿಗಳನ್ನಿತ್ತರು ಮತ್ತು ವಾರ್ಷಿಕ ಯೋಜನೆಗಳ ವಿವರಣೆಗಳನ್ನಿತ್ತರು.
 
 
ಕೃಷಿ ವಿಭಾಗ ಪ್ರಧಾನರಾದ ಭಾಸ್ಕರ ಹೆಗ್ಡೆ ಅವರು ಆ ವಿಭಾಗದ ಯೋಜನೆಗಳ ಕುರಿತು ವಿಸ್ತರಿಸಿದರು. ಜಿ. ಯಸ್. ಹೆಗ್ಡೆ, ಮುರಳಿ ಸಾಗರ, ಮಹೇಶ ಚಟ್ನಳ್ಳಿ, ಪ್ರವೀಣ ಭೀಮನಕೋಣೆ, ಕಲ್ಪನಾ ತಲವಾಟ, ರುಕ್ಮಾವತಿ ಸಾಗರ, ಮಲ್ಲಿಕಾ ಕಲ್ಲಡ್ಕ, ಬಾಲಸುಬ್ರಹ್ಮಣ್ಯ ಬೆಂಗಳೂರು, ಆನಂದ ಸುಬ್ರಹ್ಮಣ್ಯ ನಾರಾವಿ, ರಾಮಚಂದ್ರ ಭಟ್, ಗೋವಿಂದಬಳ್ಳಮೂಲೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here