ಹವಾಮಾನ ಒಪ್ಪಂದಕ್ಕೆ ಭಾರತ ಸಹಿ

0
400

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಏ.22ರಂದು ಪ್ಯಾರಿಸ್ ನಲ್ಲಿ ನಡೆದಿದ್ದ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಭಾರತ, ಅಮೆರಿಕ, ಚೀನಾ ಸೇರಿದಂತೆ ಒಟ್ಟು 175 ರಾಷ್ಟ್ರಗಳು ಸಹಿ ಹಾಕಿವೆ. ಈ ಒಪ್ಪಂದಲ್ಲಿ ಹಸಿರು ಮನೆ ಅನಿಲ ಉತ್ಪಾದನೆ ಕಡಿಮೆ ಮಾಡಲು ಹಲವು ನಿಯಮಗಳನ್ನು ಒಳಗೊಂಡಿದೆ ಎನ್ನಲಾಗಿದೆ.
 
 
 
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಒಪ್ಪಂದಕ್ಕೆ ಸಹಿ ಹಾಕಿದರು.
 
 
 
ದಿನದಿಂದ ದಿನಕ್ಕೆ ಹೆಚ್ಚಿತ್ತಿರುವ ಜಾಗತಿಕ ತಾಪಮಾನವನ್ನು ತಗ್ಗಿಸುವುದಕ್ಕೆ 2015 ರ ಡಿಸಂಬರ್ ನಲ್ಲಿ ನಡೆದ ಹವಾಮಾನ ಬದಲಾವಣೆ ಕುರಿತ ಶೃಂಗಸಭೆಯಲ್ಲಿ ಜಾಗತಿಕ ನಾಯಕರು ಕರೆ ನೀಡಿದ್ದರು. ಇದರ ಭಾಗವಾಗಿ 190ಕ್ಕೂ ಹೆಚ್ಚು ದೇಶಗಳು ಸೇರಿ ಹವಾಮಾನ ಬದಲಾವಣೆ ಬಗೆಗಿನ ಪ್ಯಾರಿಸ್‌ ಒಪ್ಪಂದವನ್ನು ರೂಪಿಸಿದ್ದವು.

LEAVE A REPLY

Please enter your comment!
Please enter your name here