ಹಳ್ಳಿಮದ್ದು

0
382

ಆರೋಗ್ಯ ವಾರ್ತೆ
ಬೆಂಡೆಕಾಯಿ
ಬೆಂಡೆಕಾಯಿ ತರಕಾರಿ ಜಾತಿಗೆ ಸೇರಿದ್ದಾಗಿದೆ. ಇದನ್ನು ಪದಾರ್ಥ ಮಾಡಲು ಬಳಸುತ್ತಾರೆ. ಹಾಗೆಯೇ ಇದು ಧನ್ವಂತರಿಯಲ್ಲೂ ಪ್ರಮುಖ ಪಾತ್ರವಹಿಸಿದೆ. ಬೆಂಡೆಕಾಯಿಯಲ್ಲಿ 75 ಮಿಲಿಗ್ರಾಂ ಸಿ ಜೀವಸತ್ವವಿದೆ. ಒಂದು ತುಂಡು ಬೆಂಡೆ ತಿಂದರೆ ಒಂದು ಕಪ್ ಟೊಮೆಟೊದಲ್ಲಿರುವಷ್ಟು ಸಿ ಜೀವಸತ್ವ ಪ್ರಾಪ್ತವಾಗುತ್ತದೆ. ಶೇ. 7.6ರಷ್ಟು ಕಾರ್ಬೋಹೈಡ್ರೇಟ್ಸ್, ಶೇ. 3.2 ನಾರು, ಶೇ. 2 ಪ್ರೊಟೀನ್, 75 ಮಿಲಿಗ್ರಾಂ ಸುಣ್ಣ, ಮೆಗ್ನೀಶಿಯಂ, ಫೋಲೆಟ್‌ಗಳಿರುವ ಅದರಲ್ಲಿ 57 ಮಿಲಿಗ್ರಾಂ ಪ್ರಮಾಣದ ಎ ಜೀವಸತ್ವವೂ ಇದೆ.
 
 
* ಹಸಿ ಬೆಂಡೆಕಾಯಿಯನ್ನು ಕ್ರಮಬದ್ಧವಾಗಿ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.
* ಕರುಳಿನಲ್ಲಿ ಆಹಾರ ತಕ್ಷಣ ಜೀರ್ಣವಾಗಿ ಮಲಬದ್ಧತೆ ನಿವಾರಿಸಲು ಬೆಂಡೆಕಾಯಿ ಸಹಕಾರಿ.
* ಬೆಂಡೆಕಾಯಿಯ ಕಷಾಯ ಸೇವನೆ ಲೋಳ್ಪರೆಯ ಉರಿಯೂತ, ಜ್ವರ, ತಲೆನೋವು, ಸಂಧಿವಾತ, ಅತಿಸಾರ  ಶಮನಗೊಳಿಸುತ್ತದೆ. ಕೆಮ್ಮು ಮತ್ತು ಗಂಟಲುನೋವಿಗೆ ಬೆಂಡೆ ರಸ ಸಿದ್ಧೌಷಧವೆನಿಸಿದೆ. ಹೊಟ್ಟೆನೋವು, ಜ್ವರದ ಭೇದಿ ನಿವಾರಿಸುತ್ತದೆ. ರಸದ ಲೇಪನದಿಂದ ಚರ್ಮದ ತುರಿಕೆ ಗುಣವಾಗಿ ಕಾಂತಿ ಹೆಚ್ಚುತ್ತದೆ.
*ಬೆಂಡೆಕಾಯಿಯಲ್ಲಿ ನೀರಿನಲ್ಲಿ ಕರಗುವ ನಾರು ಇದೆ. ಇದು ಹೃದಯದ ರಕ್ತನಾಳಗಳನ್ನು ಬಲಗೊಳಿಸಿ ಪಾರ್ಶ್ವವಾಯು, ಹೃದಯರೋಗಗಳಿಗೆ ಕಾರಣವಾಗುವ ಕೊಲೆಸ್ಟ್ರಾಲ್ ಏರಿಕೆಯನ್ನು ತಡೆಯುತ್ತದೆ.
*ದೃಷ್ಟಿದೋಷ ನಿವಾರಿಸುವ ಎ ಜೀವಸತ್ವ ಬೆಂಡೆಯಲ್ಲಿದೆ. ಬಾಯಿಯ ಕುಹರ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಿವಾರಿಸುವ ಶಕ್ತಿಯನ್ನೂ ಅದರಲ್ಲಿ ಗುರುತಿಸಲಾಗಿದೆ. ಕೀಲುರೋಗ ಮತ್ತು ಸಂಧಿವಾತ ತಡೆಯಲು ಶಕ್ತವಾದ ಮ್ಯಾಂಗನೀಸ್ ಮತ್ತು ಇ ಜೀವಸತ್ವ ಅದರಲ್ಲಿದೆ.

LEAVE A REPLY

Please enter your comment!
Please enter your name here