ಆರೋಗ್ಯವಾರ್ತೆ

ಹಳ್ಳಿಮದ್ದು: ಹೀರೇಕಾಯಿ

ಆರೋಗ್ಯ ವಾರ್ತೆ:
ಹೀರೇಕಾಯಿ ಸುಲಭವಾಗಿ ಎಲ್ಲಾ ಸ್ಥಳಗಳಲ್ಲಿ ದೊರೆಯುವ ತರಕಾರಿ. ಇದರ ಪ್ರತಿಯೊಂದು ಭಾಗವನ್ನು ಅಡುಗೆಗೆ ಉಪಯೋಗಿಸಬಹುದು. ಇದು ಉತ್ತಮ  ಪೋಷಕಾಂಶಗಳನ್ನು ಒಳಗೊಂಡಿದ್ದು, ಸುಲಭವಾಗಿ ಪಚನವಾಗುವ ಗುಣವನ್ನು ಹೊಂದಿದೆ. ಹೀರೇಕಾಯಿ ಉತ್ತಮ ಪೌಷ್ಠಿಕಾಂಶಗಳಿಂದ ಕೂಡಿದ ಶಕ್ತಿವರ್ಧಕ ತರಕಾರಿ.  ಹೀರೇಕಾಯಿಯಲ್ಲಿ ಅತ್ಯಧಿಕವಾಗಿ ಫೈಬರ್ ಹಾಗೂ ವಿಟಮಿನ್ ಸಿ, ಜಿಂಕ್, ಐರನ್, ಮೆಗ್ನೀಷಿಯಂ, ಥೈಮಿನ್ ಹಾಗೂ ಇತರೆ ಮಿನರಲ್ ಗಳನ್ನು ಹೊಂದಿದೆ.
 
ಇದರಲ್ಲಿ ಅನೇಕ ಪೋಷಕಾಂಶಗಳು ಹುದುಗಿರುವುದಲ್ಲದೆ ಹಲವಾರು ಔಷಧೀಯ ಗುಣಗಳೂ ಅಡಗಿವೆ:

  • ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.  ಸಾರು ಅಥವಾ ಹುಳಿ ರೂಪಗಳಲ್ಲಿ ಉಪಯೋಗ ಮಾಡುವುದರಿಂದ ತೂಕ ಹೆಚ್ಚುವ ಭಯವಿಲ್ಲ. ಆಮಶಂಕೆ ಉಂಟಾದಾಗ ಬೀಜವನ್ನು ಮಜ್ಜಿಗೆಯೊಂದಿಗೆ ಬಳಸಬಹುದು. ಎಲೆಯನ್ನು ಅರೆದು ಗಾಯಗಳಿಗೆ ಹಚ್ಚುವುದರಿಂದ ಗಾಯ ಮಾಯವಾಗುತ್ತದೆ. ಹೀರೆಯ ಬೇರನ್ನು ತೇದು ಮೂಲವ್ಯಾಧಿ ಮೊಳಕೆಗಳಿಗೆ ಹಚ್ಚಿದರೆ ಗುಣವಾಗುತ್ತದೆ. ರಕ್ತಸ್ರಾವವನ್ನು ತಗ್ಗಿಸುತ್ತದೆ.
  • ಬೇಯಿಸಿದ ಹೀರೆಕಾಯಿ ತಿನ್ನುವುದರಿಂದ ಮಲಬದ್ದತೆ ನಿವಾರಣೆಯಾಗುತ್ತದೆ. ಹೀರೆಕಾಯಿ ಕ್ಷಯ ಮಧುಮೇಹ, ಕೆಮ್ಮು ದಮ್ಮು ರೋಗಿಗಳಿಗೆ ಉತ್ತಮ ಆಹಾರವಾಗಿದೆ. ಇದರ ಸಿಪ್ಪೆಯಲ್ಲೀ ಪೌಷ್ಠಿಕಾಂಶಗಳಿವೆ.
  • ಹೀರೆಕಾಯಿಯ ತಿರುಳನ್ನು ಜಜ್ಜಿ ಗಾಯಕ್ಕೆ ಲೇಪಿಸಿಕೊಳ್ಳುವುದರಿಂದ ರಕ್ತಸ್ರಾವ ಬೇಗನೆ ಗುಣವಾಗುತ್ತದೆ.
  • ತೂಕ ಕಳೆದುಕೊಳ್ಳು ಹೀರೇಕಾಯಿ ಸಹಕಾರಿ.
  • ನೀರಿನಂಶ ಹೆಚ್ಚಾಗಿರುವುದರಿಂದ ಮೂಲವ್ಯಾಧಿ ನಿವಾರಣೆಯಾಗುತ್ತದೆ.
  • ಇದರಲ್ಲಿರುವ ಬೀಟಾ ಕೆರೋಟಿನ್ ದೃಷ್ಠಿಯನ್ನು ಆರೋಗ್ಯವಾಗಿಡುತ್ತದೆ.
  • ರಕ್ತದಲ್ಲಿರುವ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಗಟ್ಟಿ ರಕ್ತವನ್ನು ಶುದ್ಧಗೊಳಿಸುತ್ತದೆ.
  • ಮುಖದಲ್ಲಿರುವ ಮೊಡವೆಗಳನ್ನು ನಿವಾರಿಸಿ ಆರೋಗ್ಯವಂತೆ ಚರ್ಮ ನೀಡುತ್ತದೆ.

 

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here