ಆರೋಗ್ಯವಾರ್ತೆ

ಹಳ್ಳಿಮದ್ದು: ಸೋರೆಕಾಯಿ

 
 ಆರೋಗ್ಯ ವಾರ್ತೆ:
ಸೋರೆಕಾಯಿಯನ್ನು ಅದಿಮಾನ ಬೆಳಸೋದಕ್ಕೆ ಶುರು ಮಾಡಿದ ತರಕಾರಿಯಾಗಿದೆ. ಮೊದಲು ಇದನ್ನು ಆಫ್ರಿಕಾದಲ್ಲಿ ಬೆಳೆಸಿದ್ದಾರೆ. ನಂತರ ಈಗ ಭಾರತ, ಶ್ರೀಲಂಕಾ, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಫೈನ್ಸ್ ಸೇರಿ ಹಲವು ರಾಷ್ಟ್ರಗಳಲ್ಲಿ ಬೆಳೆಸುತ್ತಾರೆ.
ಸೋರೆಕಾಯಿಯನ್ನು ದೇಹಕ್ಕೆ ಬೇಕಾದ ಖನಿಜ, ಲವಣ ಮತ್ತು ಮಿಟಮಿನ್ ಅಂಶಗಳಿಗೆ. ಸಾಕಷ್ಟು ನಾರಿನಂಶ ಹೊಂದಿದ್ದು, ವಿಟಮಿನ್ ಸಿ, ವಿಟಮಿನ್ ಬಿ, ಸೋಡಿಯಂ, ಝಿಂಕ್ ಮತ್ತು ಕಬ್ಬಿಣ ಅಂಶವಿದೆ. ತಿಳಿ ಹಸಿರು ಸೋರೆಕಾಯಿಯಲ್ಲಿ 96%ನಷ್ಟು ನೀರಿನಂಶವಿದೆ.
 
ಆರೋಗ್ಯಕ್ಕೆ ಹೇಗೆ ಸಹಕಾರಿ?

 • ಸೋರೆಕಾಯಿ ದೇಹದ ಆರೋಗ್ಯ ಹೆಚ್ಚಿಸುವುದಷ್ಟೆ ಅಲ್ಲ, ತೂಕ ಕಡಿಮೆ ಮಾಡುವುದರಲ್ಲಿ ತುಂಬಾ ಪರಿಣಾಮಕಾರಿಯಾದ ತರಕಾರಿ.
 • ಸೋರೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆದು. ಒಂದು ಸೋರೆಯನ್ನು ತುರಿದು ರಸ ಹಿಂಡಿ ಅದಕ್ಕೆ ನಿಂಬೆ ರಸ ಹಾಕಿ ಕುಡಿದ್ರೆ ಎಷ್ಟೋ ರೋಗಗಳು ಕಮ್ಮಿ ಆಗುತ್ತದೆ. ತುಂಬಾ ಭೇದಿ ಮತ್ತು ವಾಂತಿ ಆದಾಗ ಉಂಟಾಗೋ ಸುಸ್ತು, ದಾಹವನ್ನು ಕಡಿಮೆ ಮಾಡುತ್ತದೆ.
 • ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ಉಷ್ಣದಿಂದ ಉಂಟಾಗುವ ಉರಿಮೂತ್ರ ಸಮಸ್ಯೆ ಕಮ್ಮಿ ಆಗುತ್ತದೆ.
 • ಸೋರೆ ಜ್ಯೂಸ್ ಜತೆ ಸಾಸಿವೆ ಎಣ್ಣೆ ಸೇರಿಸಿ ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ.
 • ಸೋರೆಕಾಯಿಯಲ್ಲಿ ನಾರಿನಂಶ ಅಧಿಕವಿರುವುದರಿಂದ ಹೊಟ್ಟೆ ತುಂಬುವುದು ಮತ್ತು ಜೀರ್ಣಕ್ರಿಯೆಗೆ ಸಹಾಯವಾಗಿದೆ.
 • ಸೋರೆಕಾಯಿ ಸೇವಿಸುವುದರಿಂದ ಹೊಟ್ಟೆನೋವು, ಅಜೀರ್ಣ, ಅಲ್ಸರ್ ಗಳು ಕಡಿಮೆಯಾಗುತ್ತದೆ.
 • ಆಯುರ್ವೇದ ಪ್ರಕಾರ ಲಿವರ್ ಕಾರ್ಯಕ್ಷಮತೆಗೆ ಇಂದು ತುಂಬಾ ಸಹಕಾರಿಯಾಗಿದೆ.
 • ಬೇಸಿಗೆಯಲ್ಲಿ ವಿಪರೀತ ಬೆವರು ಬರುವವರು ಈ ಜ್ಯೂಸ್ ಕುಡಿದರೆ ಒಳ್ಳೆಯದು.
 • ಸೋರೆ ಕೊಲೆಸ್ಟರಾಲ್ ನಿವಾರಕವೂ ಹೌದು. ಹೃದಯದ ತೊಂದರೆ ಮತ್ತು ಕಾಮಾಲೆ ಕಾಯಿಲೆಯವರಿಗೆ ಬಹಳ ಉಪಕಾರಿ.
 • ಫಿಟ್ಸ್ ಅಥವಾ ಹುಟ್ಟು ಅಥವಾ ಬೇರೆ ಯಾವುದಾದರೂ ನರಕ್ಕೆ ಸಂಬಂಧಿಸಿದ ತೊಂದರೆ ಸೋರೆ ಸಹಾಯಕವಾಗುತ್ತದೆ.
 • ಗರ್ಭಿಣಿ ಮಹಿಳೆಯರು ಆರಂಭದ ವಾರಗಳಲ್ಲಿ ಸೋರೆಯನ್ನು ತಿಂದರೆ ಈ ಫೋಲೆಟ್ ಗಳು ಭ್ರೂಣದ ಮೆದುಳು ಮತ್ತು ಮೆದುಳು ಬಳ್ಳಿಯ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

 
 

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here