ಹಳ್ಳಿಮದ್ದು: ಸಿಹಿಕುಂಬಳಕಾಯಿ(ಚೀನಿಕಾಯಿ)

0
3095

 
ಆರೋಗ್ಯ ವಾರ್ತೆ:
ಇದು ತರಕಾರಿ ಹಾಗೂ ಹಣ್ಣಿನ ಜಾತಿಗೆ ಸೇರಿದ್ದಾಗಿದೆ. ಸಿಹಿಕುಂಬಳಕಾಯಿ ಉತ್ತರ ಅಮೆರಿಕಾದ ಬಂದಂತಹ ಬೆಳೆ ಎನ್ನಲಾಗಿದೆ. ಇದರಲ್ಲಿ ಆರೋಗ್ಯಕ್ಕೆ ಸಹಕಾರಿಯಾಗುವ ಅಂಶಗಳು ಹೆಚ್ಚಾಗಿದೆ. ಇದರಲ್ಲಿ ದೇಹಕ್ಕೆ ಬೇಕಾದ ವಿಟಮಿನ್ ಎ,ವಿಟಮಿನ್ ಡಿ, ಕ್ಯಾಲ್ಸಿಯಂ, ಪೋಟಾಶಿಯಂ, ಸೋಡಿಯಂ, ವಿಟಮಿನ್ ಬಿ-12, ವಿಟಮಿನ್ ಸಿ, ಕಬ್ಬಿಣ, ವಿಟಮಿನ್ ಬಿ6, ಮೇಗ್ನಿಸಿಯಂ ಅಂಶಗಳು ಅಡಕವಾಗಿದೆ.
 
 

  • 2 ಚಮಚ ಸಿಹಿಕುಂಬಳದ ಬೀಜದ ಪುಡಿಯನ್ನು ಮೂರು ಬಟ್ಟಲು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆ ನೀರನ್ನು ಸೇವಿಸಿದರೆ ಹೊಟ್ಟೆಹುಳು ಕಡಿಮೆಯಾಗುತ್ತದೆ.
  • ಹಿಮೋಗ್ಲೋಬಿನ್ ಹೆಚ್ಚಿಸಲು5-10 ಗ್ರಾಂ ಸಿಹಿಕುಂಬಳದ ಬೀಜವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ 1 ತಿಂಗಳು ಸೇವಿಸಬೇಕು.
  • 5-6ಚಮಚ ಸಿಹಿಕುಂಬಳ ಕಾಯಿ ತಿರುಳಿಗೆ3-4 ಚಮಚ ಸಕ್ಕರೆ ಮತ್ತು ನಿಂಬೆ ರಸ ಸೇರಿಸಿ ಮುಖಕ್ಕೆ ಲೇಪನ ಮಾಡಿದರೆ ಸತ್ತ ಚರ್ಮ ಹೋಗಿ ಮುಖದ ಕಾಂತಿ ಹೆಚ್ಚುತ್ತದೆ.
  • ಸಿಹಿಕುಂಬಳದ ಬೇರನ್ನು ಚಂದನದ ಪುಡಿಯನ್ನು ನೀರಿನಲ್ಲಿ ಬೆರೆಸಿ ಹುಳಕಚ್ಚಿದ ಜಾಗಕ್ಕೆ ಹಚ್ಚಿದರೆ ಉರಿ ಮತ್ತು ನವೆ ಕಡಿಮೆಯಾಗುತ್ತದೆ.
  • ಚೀನಿಕಾಯಿ ಬೀಜದಲ್ಲಿ ವಿಟಮಿನ್ ಎ ಇರುವುದರಿಂದ ಆರೋಗ್ಯಯುತ ಹೊಳೆಯುವ ಚರ್ಮಕ್ಕೆ ಸಹಖಾರಿಯಾಗಿದೆ.
  • ಗಜಕರ್ಣ ಸಮಸ್ಯೆ ನಿವಾರಣೆ ಸಿಹಿಕುಂಬಳ ಎಲೆಯ ರಸವನ್ನು ಹಚ್ಚಬೇಕು.

 

LEAVE A REPLY

Please enter your comment!
Please enter your name here