ಆರೋಗ್ಯವಾರ್ತೆ

ಹಳ್ಳಿಮದ್ದು: ಮೂಲಂಗಿ

ಆರೋಗ್ಯ ವಾರ್ತೆ
ಯೂರೋಪ್ ನಲ್ಲಿ ಪೂರ್ವ-ರೋಮನ್ ಕಾಲದಲ್ಲಿ ಒಗ್ಗಿಸಲಾದ ಬ್ರ್ಯಾಸಿಕೇಸಿಯಿ ಕುಟುಂಬದ ಒಂದು ತಿನ್ನಬಹುದಾದ ಗಡ್ಡೆ ತರಕಾರಿ. ಅವನ್ನು ವಿಶ್ವಾದ್ಯಂತ ಬೆಳೆಸಲಾಗುತ್ತದೆ ಮತ್ತು ಸೇವಿಸಲಾಗುತ್ತದೆ. ಮೂಲಂಗಿ ಗಾತ್ರ, ಬಣ್ಣ ಮತ್ತು ಬೇಕಾಗುವ ಬೇಸಾಯ ಸಮಯಾವಧಿಯಲ್ಲಿ ಬದಲಾಗುವ ಅನೇಕ ಬಗೆಗಳನ್ನು ಹೊಂದಿದೆ. ಮೂಲಂಗಿಯನ್ನು ಇಂಗ್ಲೀಷ್ ನಲ್ಲಿ ರ್ಯಾಡಿಷ್ ಎನ್ನುತ್ತಾರೆ.
 
 
ಮೂಲಂಗಿ ಸಸ್ಯಹಾರಿಗಳ ಬಹು ಬಳಕೆಯ ತರಕಾರಿ. ಸಲಾಡ್ ಒಂದೇ ಅಲ್ಲ ಬಗೆ ಬಗೆಯಲ್ಲಿ ಅದನ್ನು ಸೇವಿಸಲಾಗುತ್ತೆ. ಮೂಲಂಗಿಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಅಂಶವಿದೆ. ಅಲ್ಲದೆ ಸಾರಜನಕ, ಪಿಷ್ಟ, ಮೇದಸ್ಸು, ಖನಿಜಾಂಶ, ನಾರಿನಾಂಶ, ರಂಜಕ, ಸೋಡಿಯಂ, ಪೊಟ್ಯಾಷಿಯಂ, ರೈಬೋಪ್ಲೆವಿನ್, ಆಕ್ಸಾನಿಕ್ ಆಮ್ಲ, ಎ-ಸಿ ಜೀವಸತ್ವ, ಸುಣ್ಣ, ಕಬ್ಬಿಣ, ಥಯಾಮಿನ್ ನಂತಹ ಪೋಷಕಾಂಶಗಳಿವೆ. ಮೂಲಂಗಿ ಕೇವಲ ರುಚಿಯೊಂದೇ ಅಲ್ಲ, ಅದರಲ್ಲಿ ರೋಗನಿರೋಧಕ ಶಕ್ತಿ ಇದೆ.
 
 
ಆರೋಗ್ಯಕ್ಕೆ ಹೇಗೆ ಸಹಕಾರಿ:

 • ಆಹಾರದಲ್ಲಿ ಮೂಲಂಗಿಯ ನಿಯಮಿತ  ಬಳಕೆಯಿಂದ ಹಲ್ಲಿನ ತೊಂದರೆ ದೂರವಾಗುತ್ತದೆ.
 • ಮೂಲಂಗಿ ಸೇವನೆಯಿಂದ ಅದರಲ್ಲಿರುವ ವಿಟಿಮಿನ್ ಸಿ ನಮ್ಮ ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುವುದಲ್ಲದೆ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಇದು ಕ್ಯಾನ್ಸರ್ ಬರುವುದನ್ನೂ ತಡೆಯಬಲ್ಲದು.
 • ಕಾಮಾಲೆ ರೋಗದ ಚಿಕಿತ್ಸೆಗೆ ಸಹಕಾರಿ. ಮೂಲಂಗಿಯ ಬೇರಿನ ಭಾಗ ಮಾತ್ರವಲ್ಲ, ಅದರ ಸೊಪ್ಪಿನ ಬಳಕೆ ಕೂಡ ಉಪಯುಕ್ತ.
 • ಚರ್ಮದ ಆರೋಗ್ಯಕರ ತೇವಾಂಶವನ್ನು ಮೂಲಂಗಿ ಕಾಪಾಡಿ ಕಾಂತಿಯುಕ್ತಗೊಳಿಸುತ್ತದೆ. ಒಣಚರ್ಮ, ದದ್ದು, ಬಿರುಕುಗಳ ಶಮನಕ್ಕೆ ಮೂಲಂಗಿಯನ್ನು ಹಾಲಿನಲ್ಲಿ ಅರೆದು ಫೇಸ್‌ಪ್ಯಾಕ್ ಹಾಕುವುದು ಉಪಯುಕ್ತವಾಗಿದೆ.
 • ಮೂಲಂಗಿ ಸೇವಿಸಿದರೆ ಬೇಗ ಹಸಿವಾಗುವುದಿಲ್ಲ. ಹೊಟ್ಟೆ ತುಂಬಿದ ಅನುಭವವವನ್ನೇ ನೀಡುತ್ತದೆ. ಅಂದರೆ ಅದು ದೇಹದ ತೂಕವನ್ನು ನಿಯಂತ್ರಿಸುತ್ತದೆ. ತೆಳ್ಳಗಾಗಬೇಕು ಎನ್ನುವವರು, ತಮ್ಮ ತಿನ್ನುವ ಚಟವನ್ನು ನಿಯಂತ್ರಿಸಿಕೊಳ್ಳಬೇಕು ಎಂಬುವವರು ಮೂಲಂಗಿ ಸಹಕಾರಿಯಾಗತ್ತದೆ.
 • ಇನ್ನು, ಮೂಲವ್ಯಾಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ ಬಳಸಲು ವೈದ್ಯರೇ ಸಲಹೆ ನೀಡುತ್ತಾರೆ.
 • ಮೂಲಂಗಿ ಸೇವನೆಯಿಂದ ಕೂದಲು ಹೊಳೆಯುವುದಲ್ಲದೇ, ಉದುರುವ ಸಮಸ್ಯೆಯಿಂದಲೂ ಮುಕ್ತಿ ದೊರೆಯುತ್ತದೆ.
 • ಮೂತ್ರಕೋಶ ಮತ್ತು ಮೂತ್ರಪಿಂಡವನ್ನು ಶುಚೀಕರಿಸಲು ಸಹಕಾರಿಯಾದ ಮೂಲಂಗಿ ಸೇವನೆಯಿಂದ ಉರಿಮೂತ್ರ ಮುಂತಾದ ಮೂತ್ರ ಸಂಬಂಧಿ ಕಾಯಿಲೆಗಳಿಂದ ಮುಕ್ತಿ ಹೊಂದಲು ಅನುವಾಗುತ್ತದೆ.
 • ಮೂಲಂಗಿಯಲ್ಲಿರುವ ಮೈರೊಸಿನೇಸ್, ಡಯಸ್ಟೇಟ್, ಎಮಿಲೇಸ್, ಎಸ್ಟೆರೇಸ್ ಕಿಣ್ವಗಳು ಪಿತ್ಥಕೋಶದ ಸೋಂಕು ಮತ್ತು ಹುಣ್ಣುಗಳನ್ನು ನಿವಾರಿಸುತ್ತವೆ. ಹಳದಿ ಕಾಮಾಲೆ(ಜಾಂಡಿಸ್) ರೋಗ ಬಂದಾಗ ರಸದ ಸೇವನೆ ಮಾಡಿದರೆ ರೋಗವನ್ನು ಶೀಘ್ರವಾಗಿ ಗುಣಪಡಿಸಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ.
 • ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ಸಹಕಾರಿ.
 • ಅಸ್ತಮ ಮುಂತಾದ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ ಸೇವನೆ ಒಳ್ಳೆಯದು.
 • ನಿತ್ಯವೂ ಮೂಲಂಗಿ ಸೇವಿಸುವವರಿಗೆ ಹೃದಯಾಘಾತದ ಸಂಭವ ಕಡಿಮೆ. ರಕ್ತದಲ್ಲಿರುವ ಸಕ್ಕರೆಯ ಗುಣಮಟ್ಟವನ್ನು ನಿಯಂತ್ರಿಸುವ ಮೂಲಕ ಮಧುಮೇಹದವರಿಗೂ ಉಪಕಾರಿಯಾಗಿದೆ. ಅತಿಸಾರಕ್ಕೂ ಅದರ ಎಲೆಗಳ ಕಷಾಯ ಮದ್ದಾಗುತ್ತದೆ.
 • ಹಸಿ ಮೂಲಂಗಿಯ ಚೂರುಗಳಿಗೆ ನಿಂಬೆರಸ, ಕಾಳು ಮೆಣಸಿನಪುಡಿ ಮತ್ತು ಉಪ್ಪು ಬೆರೆಸಿ ತಿನ್ನುವುದರಿಂದ ಕಾಮಾಲೆ ರೋಗ, ಕಣ್ಣಿನ ತೊಂದರೆ, ಅಜೀರ್ಣ ನಿವಾರಣೆಯಾಗುತ್ತದೆ.
 • ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.
 • ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.
 • ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು,ಮೂಗು,ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.

 

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here