ಹಳ್ಳಿಮದ್ದು: ಮುಳ್ಳುಸೌತೆ

0
453

ಆರೋಗ್ಯ ವಾರ್ತೆ:
ಮುಳ್ಳುಸೌತೆ ಬಹಳ ಹೆಲ್ತಿಯಾದ ತರಕಾರಿಯಾಗಿದೆ. ಇದು ಕಡಿಮೆ ಕ್ಯಾಲೋರಿಸ್ ಇರುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗಿದೆ.
ಸಲಾಡ್‌ಗೆ ಒಂದು ಉತ್ಕೃಷ್ಟ ತರಕಾರಿಯಾಗಿರುವ ಇದು ನಿಮ್ಮ ಆಹಾರದಲ್ಲಿ ನ್ಯೂಟ್ರೀಶಿಯನ್ ಅನ್ನು ಹೇರಳವಾಗಿ ಪೂರೈಸುತ್ತದೆ.
ಮುಳ್ಳುಸೌತೆಯನ್ನು ತಿಂದರೆ ಅದರಲ್ಲಿ ನೀರಿನಂಶ ಅಧಿಕವಿರುವುದರಿಂದ ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ,
ಪ್ರತಿದಿನ ಸೌತೆಕಾಯಿಯ ಬಳಕೆಯು ರಕ್ತಶುದ್ಧೀಕರಣಕ್ಕೆ ಉಪಯುಕ್ತವಾಗಿದೆ.
 
ಪ್ರತಿದಿನ ಒಂದೆರಡು ಸೌತೆಕಾಐಇಗಳ ಸೇವನೆಯಿಂದ ಕೂಲುನೋವನ್ನು ಹತೋಟಿಯಲ್ಲಿಡಬಹುದು.
ಅಧಿಕ ಹಾಗೂ ಕಡಿಮೆ ಬಿಪಿ ಸಮಸ್ಯೆಗಳಿಂದ ನೀವು ಬಳಲುತ್ತಿದ್ದಲ್ಲಿ ಮುಳ್ಳುಸೌತೆ ಜ್ಯೂಸ್ ನಿಮಗೆ ಪರಿಣಾಮಕಾರಿಯಾಗಿದೆ.
ವಿಟಮಿನ್ ಎ ಮತ್ತು ಇತರ ಅಗತ್ಯ ಪ್ರೊಟೀನ್‌ಗಳೊಂದಿಗೆ ಮುಳ್ಳುಸೌತೆ ನಿಮ್ಮ ದೃಷ್ಟಿಗೆ ಉತ್ತಮ ಪರಿಣಾಮವನ್ನು ಬೀರುತ್ತದೆ. ನಿಮ್ಮ ಕಣ್ರೆಪ್ಪೆಗಳಿಗೆ ಮುಳ್ಳುಸೌತೆಯನ್ನು ತುಂಡರಿಸಿ ಇಡುವುದರಿಂದ ಕಣ್ಣು ತಂಪಾಗಿರುತ್ತದೆ. ಇಲ್ಲವೇ ಇದರ ಜ್ಯೂಸ್ ಸೇವನೆ ಕೂಡ ಕಣ್ಣಿಗೆ ಉತ್ತಮ.
 
ನೀವು ತೂಕವನ್ನು ಇಳಿಸುವ ಗುರಿಯನ್ನು ಹೊಂದಿರುವವರಾಗಿದ್ದಲ್ಲಿ, ಮುಳ್ಳುಸೌತೆ ಜ್ಯೂಸ್ ಅನ್ನು ಸೇವಿಸಲೇಬೇಕು. ದೇಹಕ್ಕೆ ಬೇಕಾದ ನ್ಯೂಟ್ರೀಶಿಯನ್ ಪೂರೈಕೆ ಮಾಡುತ್ತಾ ದೇಹ ತೂಕವನ್ನು ಇಳಿಸಿಕೊಳ್ಳುವ ಸುಲಭ ವಿಧಾವಾಗಿದೆ ಮುಳ್ಳುಸೌತೆ ಜ್ಯೂಸ್ ಸೇವನೆ.
ನಿಮ್ಮ ತ್ವಚೆಯ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಮಿನರಲ್ಸ್ ಮುಳ್ಳುಸೌತೆಯಲ್ಲಿದೆ. ನಿಮ್ಮ ಸಂಪೂರ್ಣ ದೇಹ ಕೂಡ ಅತ್ಯಗತ್ಯ ಮಿನರಲ್ಸ್ ಪೂರೈಕೆಯನ್ನು ಮುಳ್ಳುಸೌತೆಯಿಂದ ಪಡೆಯುತ್ತದೆ.
ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಅಂಶ ವಿಟಮಿನ್ ಆಗಿದೆ. ಮುಳ್ಳುಸೌತೆ ಎ, ಬಿ ಹಾಗೂ ಸಿ ಮತ್ತು ಕೆ ಸತ್ವಗಳಿಂದ ಕೂಡಿದ್ದು ದೇಹಕ್ಕೆ ವಿಟಮಿನ್‌ನ ಉತ್ತಮ ಪೂರೈಕೆಯನ್ನು ಮಾಡುತ್ತದೆ. ವಿಟಮಿನ್‌ಗಳು ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ದೂರೀಕರಿಸಿ ನಿಮ್ಮ ತ್ವಚೆಯನ್ನು ಹೊಳೆಯುವಂತೆಮಾಡುತ್ತದೆ.
 
ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಮುಳ್ಳುಸೌತೆ ಮುಖ್ಯ ಸಾಮಾಗ್ರಿಯಾಗಿದೆ. ಕಿಡ್ನಿ ಸ್ಟೋನ್ ಸಮಸ್ಯೆ ನಿಮಗಿದ್ದಲ್ಲಿ ಮುಳ್ಳುಸೌತೆ ಜ್ಯೂಸ್ ಅನ್ನು ಸೇವಿಸಲು ಮರೆಯದಿರಿ. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹಾಕಿ ದೇಹದ ಸ್ವಾಸ್ಥ್ಯವನ್ನು ಕಾಪಾಡುತ್ತದೆ.
ಬಿಸಿಲಿನ ಬೇಗೆ ದೇಹಕ್ಕೆ ಪರಮ ಶತ್ರು. ಈ ಸಮಯದಲ್ಲಿ ತಂಪಿನ ಪರಿಹಾರವನ್ನು ನೀವು ಮಾಡಲೇಬೇಕು. ಮುಳ್ಳುಸೌತೆಯ ಜ್ಯೂಸ್ ದೇಹದ ಉಷ್ಣವನ್ನು ನಿವಾರಿಸಿ ತಂಪನ್ನೀಯುತ್ತದೆ. ಸನ್‌ಬರ್ನ್ ನಿಮಗುಂಟಾದಲ್ಲಿ ಕೂಡ ಮುಳ್ಳುಸೌತೆ ಜ್ಯೂಸ್ ಅನ್ನು ದೇಹಕ್ಕೆ ಸವರಿಕೊಳ್ಳಿ. ತುರ್ತು ಪರಿಹಾರ ನಿಮಗೆ ದೊರಕುತ್ತದೆ.
 

LEAVE A REPLY

Please enter your comment!
Please enter your name here