ಆರೋಗ್ಯವಾರ್ತೆ

ಹಳ್ಳಿಮದ್ದು: ಬೀಟ್ ರೂಟ್

ಆರೋಗ್ಯ ವಾರ್ತೆ:
ಬೀಟ್ ರೂಟ್ ದೈನಂದಿನ ಜೀವನದಲ್ಲಿ ಅಡುಗೆಮನೆಯ ನೆಚ್ಚಿನ ಸಂಗಾತಿಯಾಗಿದೆ. ಜತೆಗೆ ಈ ಬೀಟ್ ರೂಟ್ ಆರೋಗ್ಯದ ಭಂಡಾರ ಕೂಡಾ ಹೌದು. ನೈಸರ್ಗಿಕವಾಗಿ ದೇಹಕ್ಕೆ ಶಕ್ತಿ ನೀಡುವ ಬೀಟ್ ರೂಟ್ ಎ, ಬಿ1, ಬಿ2, ಬಿ6, ಫಾಲಿಕ್ ಆಸಿಡ್ ಬಿ12, ಹಾಗೂ ಸಿ ವಿಟಮಿನ್ ಗಳಿಂದ ಸಮೃದ್ಧವಾಗಿದೆ.
ಅದರ ಉಪಯುಕ್ತತೆಗಳ ಬಗ್ಗೆ ತಿಳಿಯಿರಿ:

 • ಫಾಲಿಕ್ ಆಸಿಡ್ ಆರೋಗ್ಯಕ್ಕೆ ತುಂಬಾ ಅಗತ್ಯ. ಇದು ಜೀವಕಣಗಳ ಉತ್ಪತ್ತಿ ಹೆಚ್ಚಾಗಲು ಸಹಾಯ ಮಾಡುತ್ತದೆ.
 • ಬೀಟ್ ರೂಟ್ ದೇಹದಲ್ಲಿ ರಕ್ತ ಉತ್ಪತ್ತಿಯಾಗಲು ನೆರವಾಗುತ್ತದೆ ಹಾಗೂ ರಕ್ತದಲ್ಲಿರುವ ಕಲ್ಮಶಗಳನ್ನು ಕಿತ್ತೊಗೆಯಲು ನೆರವಾಗುತ್ತದೆ.
 • ಬೀಟ್ರೂಟ್ ಕಾರ್ಬೋಹೈಡ್ರೇಟ್ ಗಳಿಂದ ಸಮೃದ್ಧವಾಗಿದ್ದು, ದೇಹಕ್ಕೆ ತಕ್ಷಣವಾಗಿ ಶಕ್ತಿಯನ್ನು ನೀಡುತ್ತದೆ.
 • ಬೀಟ್ರೂಟ್ ನಲ್ಲಿ ಕ್ಯಾಲೋರಿ ಅಂಶ ಕಡಿಮೆ ಇದ್ದು ಇದು ಕೊಬ್ಬು ರಹಿತವಾಗಿದೆ.
 • ಬೀಟ್ ರೂಟ್ ಸೇವಿಸುತ್ತಿದ್ದರೆ ಮೆದುಳಿನ ನೆನಪಿನ ಶಕ್ತಿ ಉತ್ತಮವಾಗಿರುತ್ತದೆ.
 • ಮೂಳೆಗಳನ್ನು ಬಳಗೊಳಿಸುತ್ತದೆ. ಯೌವ್ವನವನ್ನು ವೃದ್ಧಿಸುತ್ತದೆ.
 • ಉದರದ ಗೆಡ್ಡೆಗಳು ಆಗದಂತೆ ಬೀಟ್ ರೂಟ್ ಕಾರ್ಯನಿರ್ವಸುತ್ತದೆ ಹಾಗೂ ಕ್ಯಾನ್ಸರ್ ಬರದಂತೆ ತಡೆಯುವ ಶಕ್ತಿ ಬೀಟ್ರೂಟ್ಗಿದೆ.
 • ಪಿತ್ತಕೋಶದ ವಿಷಕಾರಿ ಅಂಶಗಳನ್ನು ಹೊರಹಾಕಲು ಬೀಟ್ ರೂಟ್ ಸಹಾಯ ಮಾಡುತ್ತದೆ. ಉದರದ ಸಮಸ್ಯೆಗಳನ್ನು ಬೀಟ್ ರೂಟ್  ಗುಣಪಡಿಸುತ್ತದೆ.
 • ಕಿಡ್ನಿ ಸಮಸ್ಯೆಗಳಿಗೆ ಸಹ ಬೀಟ್ ರೂಟ್ ರಾಮಬಾಣವಾಗಿದೆ.
 • ನಿತ್ಯ ಬೀಟ್ ರೂಟ್ ಸೇವಿಸಿದರೆ ಕೂದಲಿನ ಆರೋಗ್ಯವೂ ಚೆನ್ನಾಗಿರುತ್ತದೆ.
 • ಸಲಾಡ್ ರೂಪದಲ್ಲಿ ಹಸಿಯಾದ ಬೀಟ್ರೂಟ್ ತಿನ್ನುವುದರಿಂದ ದೇಹವು ಆರೋಗ್ಯಪೂರ್ಣವಾಗಿ ತ್ವಚೆಯು ಹೊಸ ಚೈತನ್ಯದಿಂದ ನಳನಳಿಸುತ್ತದೆ.

 

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here