ಆರೋಗ್ಯವಾರ್ತೆ

ಹಳ್ಳಿಮದ್ದು: ನವಿಲುಕೋಸು

ವಾರ್ತೆ ರೆಸಿಪಿ
ನವಿಲುಕೋಸು ಒಂದು ಬಹುವಾರ್ಷಿಕ ತರಕಾರಿ, ಮತ್ತು ಅದು ಎಲೆಕೋಸಿನ ಒಂದು ತಗ್ಗಾದ, ದಪ್ಪನೆಯ ತಳಿ. ನವಿಲುಕೋಸನ್ನು ಹಸಿಯಾಗಿ ಅಥವಾ ಬೇಯಿಸಿ ತಿನ್ನಬಹುದು.
 
 
ಗೆಡ್ಡೆಕೋಸಿನಲ್ಲಿ ಶೇ.92.7 ತೇವಾಂಶ ಶೇ.1.1 ನೈಟ್ರೋಜನ್, ಶೇ.0.2 ಕೊಬ್ಬು, ಶೇ.3.8 ಕಾರ್ಬೊಹೈಡ್ರೇಟ್, ಶೇ.0.7 ಲವಣ ಪದಾರ್ಥ, ಶೇ.1.5 ನಾರು; ಲವಣ ಪದಾರ್ಥಗಳಲ್ಲಿ ಮುಖ್ಯವಾದವು ಕ್ಯಾಲ್ಸಿಯಂ, ಮೆಗ್ನೀಸಿಯಂ, ಫಾಸ್ಫರಸ್, ಕಬ್ಬಿಣ, ತಾಮ್ರ, ಗಂಧಕ. ಗಂಧಕದ ಅಂಶ ವಿಶೇಷವಾಗಿರುವುದರಿಂದ ಗೆಡ್ಡೆಕೋಸಿಗೆ ಒಂದು ವಿಧದ ತೀಕ್ಷ್ಣ ವಾಸನೆಯಿದೆ.
 
 
 
ಔಷಧೀಯ ಗುಣಗಳು:

  • ನವಿಲು ಕೋಸು ಸಹ ಚಳಿಗಾಲದಲ್ಲಿ ಅತ್ಯಂತ ಆರೋಗ್ಯಕರ ತರಕಾರಿ. ಇದನ್ನು ಬೇಯಿಸಿ ತಿನ್ನುವುದರಿಂದ ಇದರಲ್ಲಿನ ಪೋಷಕಾಂಶಗಳು ಮರೆಯಾಗಬಹುದು. ಆದ್ದರಿಂದ ಎಳೆಯ ಗೆಡ್ಡೆಗಳನ್ನು ಹಸಿಯಾಗಿಯೇ ತಿನ್ನುವುದು ಒಳ್ಳೆಯದು. ಮಧುಮೇಹಕ್ಕೆ ಇದು ಒಳ್ಳೆಯ ಮದ್ದೂ ಹೌದು.
  • ನವಿಲುಕೋಸಿನ ಸೇವನೆಯಿಂದ ಶರೀರಕ್ಕೆ ಬಲ ಸಿಗುತ್ತದೆ.
  • ಹಲ್ಲಿನ ವಸಡುಗಳು ಬಲಿಷ್ಠಗೊಳ್ಳುತ್ತದೆ.
  • ನವಿಲುಕೋಸಿನ ನಿಯಮಿತ ಸೇವನೆಯಿಂದ ಎದೆ ಉರಿ ಕಡಿಮೆಯಾಗುತ್ತದೆ.
  • ಈ ತರಕಾರಿಯನ್ನು ಹಸಿಯಾಗಿ ತಿಂದಲ್ಲಿ ಹೆಚ್ಚು ಲಾಭದಾಯಕವಾಗಿದೆ. ಸಕ್ಕರೆ ಕಾಯಿಲೆಯಿಂದ ನರಳುತ್ತಿರುವವರು ಮತ್ತು ಸ್ಥೂಲಕಾಯರು ಹೆಚ್ಚು ಬಳಸಬೇಕು.
  • ಇದರ ಸೇವನೆಯಿಂದ ಕರುಳುಗಳ ಚಲನೆ ಉತ್ತಮಗೊಂಡು ಮಲಬದ್ಧತೆ ದೂರವಾಗುತ್ತದೆ.

 
 

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here