ಹಳ್ಳಿಮದ್ದು: ತೊಂಡೆಕಾಯಿ

0
755

 
ಆರೋಗ್ಯ ವಾರ್ತೆ
ತೊಂಡೆಕಾಯಿ
ತೊಂಡೆಕಾಯಿಯನ್ನು ವಿದೇಶದಲ್ಲಿ ತಿನ್ನುವುದಿಲ್ಲ. ಆದ್ದರಿಂದ ಇದಕ್ಕೆ ಯಾವುದೇ ಇಂಗ್ಲೀಷ್ ಹೆಸರು ಕೂಡ ಇಲ್ಲ. ಇದರಲ್ಲಿ ಕ್ಯಾಲೋರಿ ಅಂಶ ಕಡಿಮೆ ಇರುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ತೊಂಡೆಕಾಯಿಯಲ್ಲಿ ಕ್ಷಾರ, ಸಕ್ಕರೆ, ಅಂಟು, ಮೇದಸ್ಸು, ಕಾರ್ಬಾನಿಕ್ ಆಮ್ಲ ಮೊದಲಾದ ಅಂಶಗಳಿವೆ.
 
 
ಔಷಧಿಯ ಗುಣಗಳು:
ಕಫ: ತೊಂಡೆಕಾಯಿಯನ್ನು ಹೆಚ್ಚಾಗಿ ಸೇವಿಸುವುದರಿಂದ ಕಫದ ತೊಂದರೆಗಳು ನಿವಾರಣೆಯಾಗುತ್ತದೆ.
ಶರೀರದ ಯಾವುದೇ ಭಾಗದಲ್ಲಿ ಊತ ಕಂಡುಬಂದರೆ ತೊಂಡೆಯ ಎಲೆಗಳನ್ನು ಚೆನ್ನಾಗಿ ಅರೆದು ಪಟ್ಟು ಹಾಕಿದರೆ ಊತ ಕಡಿಮೆಯಾಗುತ್ತದೆ.
ಮುಟ್ಟಿನ ಸಂದರ್ಭದಲ್ಲಿ ತೊಂಡೆಕಾಯಿಯನ್ನು ಸೇವಿಸುವುದರಿಂದ ಮುಟ್ಟಿನ ನೋವು ಕಡಿಮೆಯಾಗುತ್ತದೆ.
ಮಧುಮೇಹ ರೋಗಿಗಳಿಗೆ ತೊಂಡೆಕಾಯಿ ಸೇವೆನೆ ರಾಮಬಾಣವಾಗಿದೆ.

LEAVE A REPLY

Please enter your comment!
Please enter your name here