ಹಳ್ಳಿಮದ್ದು: ತುಳಸಿ

0
481

 
ಆರೋಗ್ಯ ವಾರ್ತೆ:
ತುಳಸಿ ಮಾತೆ ಔಷಧಿಗೂ ಸೈ
ಆಯುರ್ವೇದದಲ್ಲಿ ತುಳಸಿಗೆ ಅಗ್ರಸ್ಥಾನವಿದೆ. ಚಮತ್ಕಾರಿ ಗುಣಗಳ ಸಂಗಮ ತುಳಸಿಯಲ್ಲಿದೆ. ಅಪಾರ ಔಷಧೀಯ ಗುಣಗಳಿರುವ ಸಸ್ಯವೇ ತುಳಸಿಯಾಗಿದೆ. ನಮ್ಮ ಆರೋಗ್ಯಕ್ಕೆ ತುಳಸಿ ಒಂದು ವರದಾನವಾಗಿದೆ. ಹಲವು ಕಾಯಿಲೆಗಳಿಗೆ ತುಳಸಿ ರಾಮಬಾಣವಾಗಿದೆ. ತುಳಸಿ ಅಂದ್ರ ಸಕಾರಾತ್ಮಕ ಶಕ್ತಿಯಾಗಿದೆ. ತುಳಸಿಯ ಪ್ರತಿಯೊಂದು ಭಾಗದಲ್ಲಿ ಔಷಧೀಯ ಗುಣಗಳಿವೆ.
 
 
ಈ ಎಲ್ಲಾ ರೋಗಳು ತುಳಸಿಯಿಂದ ಪರಿಹಾರವಾಗುತ್ತದೆ. ಅವುಗಳೆಂದರೆ:
ನಿತ್ಯ ತುಳಸಿ ಸೇವಿಸಿದರೆ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ.
ತುಳಸಿ ರಸವನ್ನು ಕಿವಿಯೊಳಗೆ ಬಿಟ್ಟರೆ ಕಿವಿ ನೋವು ಕಡಿಮೆಯಾಗುತ್ತದೆ.
ತುಳಸಿ ಗಿಡ ಇರುವಲ್ಲಿ ಸೊಳ್ಳೆ ಕೀಟಗಳಿರಲ್ಲ.
ಕೆಮ್ಮು, ನೆಗಡಿ, ಜ್ವರಕ್ಕೆ ತುಳಸಿ ದಿವ್ಯೌಷಧವಾಗಿದೆ.
ಜೇನುತುಪ್ಪದ ಜತೆ ತುಳಸಿ ರಸ ಸೇವಿಸಿದರೆ ಕಿಡ್ನಿಯ ಕಲ್ಲು ಕರಗಿಸುತ್ತದೆ.

ತುಳಸಿ ಬೇರಿನಿಂದ ಕಷಾಯ ಮಾಡಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.
ತುಳಸಿ ರಸ, ಶುಂಠಿ, ಜೇನುತುಪ್ಪ, ಈರುಳ್ಳಿ ರಸ ಇವುಗಳನ್ನು ಕಲಸಿಕೊಂಡು ಸೇವಿಸಿದರೆ ಶೀತ ಮಾಯವಾಗುತ್ತದೆ.

 
ತುಳಸಿ ರಸ ದಿಂದ ಗಂಧವನ್ನು ತೇಯ್ದು ನೆತ್ತಿಗೆ ಹಚ್ಚಿದರೆ ತಲೆನೋವು ಉಪಶಮನವಾಗುತ್ತದೆ.
ತುಳಸಿ ಜಗಿದರೆ ಬಾಯಿಯ ದುರ್ವಾಸನೆ ದೂರವಾಗಿದೆ.
ತುಳಸಿ ಗಿಡ ವಾಸ್ತುದೋಷ ನಿವಾರಿಸುತ್ತದೆ.
ತುಳಸಿ ರಸಕ್ಕೆ ನಿಂಬೆ ರಸ ಸೇರಿಸಿ ಲೇಪಿಸಿದರೆ ಚರ್ಮರೋಗ ಗುಣವಾಗುತ್ತದೆ.
ತುಳಸಿ ರಸ ಸೇವನೆಯಿಂದ ನಿದ್ರಾಹೀನತೆ ದೂರವಾಗುತ್ತದೆ.
ನಿತ್ಯ ಸೇವನೆಯಿಂದ ಕೊಲೆಸ್ಟ್ರಾಲೆ ಕರಗುತ್ತದೆ.
ಖಾಲಿ ಹೊಟ್ಟೆಯಲ್ಲಿ ತುಳಸಿ ರಸ ಸೇವಿಸಿದರೆ ತ್ವಚೆ ಕಾಂತಿಯುತವಾಗುತ್ತದೆ.
ತುಳಸಿ ಸೇವನೆಯಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ.
ತುಳಸಿ ಎಲೆಯನ್ನು ಜಗಿದರೆ ಹಲ್ಲುನೋವನ್ನು ದೂರವಾಗುತ್ತದೆ.
ತುಳಸಿ ರಸ ಹಚ್ಚಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.
 

LEAVE A REPLY

Please enter your comment!
Please enter your name here