ಹಳ್ಳಿಮದ್ದು-ಟೊಮೆಟೊ

0
241

 
ಆರೋಗ್ಯ ವಾರ್ತೆ

ಇದು ಸೋಲನೇಸಿ ಕುಟುಂಬಕ್ಕೆ ಸೇರಿದ ಒಂದು ಗಿಡ.ಮಧ್ಯ ಅಮೇರಿಕ ಹಾಗೂ ದಕ್ಷಿಣ ಅಮೇರಿಕ ಟೊಮೇಟೊ ಮೂಲವಾಗಿದೆ. ಇದು ಹಣ್ಣು ಹೌದು-ತರಕಾರಿಯೂ ಹೌದು. ಇದೊಂದು ಸಿಟ್ರಸ್‌ಯುಕ್ತ ಹಣ್ಣಾಗಿದ್ದರೂ ಇದನ್ನು ಹೆಚ್ಚಾಗಿ ತರಕಾರಿಯೆಂದೇ ಪರಿಗಣಿಸಲಾಗುತ್ತದೆ. ಇದರಲ್ಲಿ ವಿಟಮಿನ್ ‘ಸಿ’ ಸಮೃದ್ಧವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

 

ವಿಟಮಿನ್‌ಗಳು, ಮೆಗ್ನಿಷಿಯಂ, ರಂಜಕ, ಕ್ಯಾಲ್ಷಿಯಂ ಮತ್ತು ತಾಮ್ರದ ಅಂಶಗಳನ್ನು ಹೊಂದಿದೆ. ಟೊಮೆಟೊ ಅಧಿಕ ಕೊಲೆಸ್ಟರಾಲ್, ಪಾರ್ಶ್ವವಾಯು ಮತ್ತು ಹೃದ್ರೋಗದ ವಿರುದ್ಧ ರಕ್ಷಣೆ ನೀಡುತ್ತದೆ. ಇದಕ್ಕೆ ಕ್ಯಾನ್ಸರ್ ವಿರುದ್ಧ ಹೋರಾಡುವ ನೈಸರ್ಗಿಕ ಗುಣವಿದೆ. ಇದರಲ್ಲಿರುವ ಲೈಕೊಪೀನ್ ಅಂಶ ಹೊಟ್ಟೆ, ಗಂಟಲು, ಬಾಯಿ, ಅಂಡಾಶಯ ಹಾಗೂ ಅದಕ್ಕೆ ಸಂಬಂಧಿಸಿದ ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

 
 

ಮೂಳೆಗಳನ್ನು ಟೊಮೆಟೊ ಶಕ್ತಿಶಾಲಿಯನ್ನಾಗಿಸುತ್ತದೆ. ಇದರಲ್ಲಿ ಲಭ್ಯವಿರುವ ಕ್ಯಾಲ್ಷಿಯಂ ಮತ್ತು ವಿಟಮಿನ್ ಕೆ ಎರಡೂ ಮೂಳೆಗಳ ಆರೋಗ್ಯಕ್ಕೆ ಅಗತ್ಯ. ಸಿ ಮತ್ತು ಎ ವಿಟಮಿನ್‌ಗಳು ದೇಹದ ರೋಗ ನೀರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

 
 
 

ಇದರಲ್ಲಿರುವ ಬಿ-6 ವಿಟಮಿನ್ ರಕ್ತನಾಳಗಳನ್ನು ಹಾನಿಯಿಂದ ರಕ್ಷಿಸುತ್ತದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಷಿಯಂ ಅಂಶ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

 

Advertisement
ಪ್ರತಿದಿನವೂ ಒಂದು ಟ್ಯೊಮೆಟೊ ಹಣ್ಣನ್ನು ಸೇವಿಸುತ್ತಾ ಬಂದರೆ ಹಲ್ಲು ಮತ್ತು ವಸಡು ಗಟ್ಟಿಯಾಗುತ್ತದೆ.

 
 
 

LEAVE A REPLY

Please enter your comment!
Please enter your name here