ಆರೋಗ್ಯವಾರ್ತೆ

ಹಳ್ಳಿಮದ್ದು: ಕ್ಯಾರೆಟ್

ಆರೋಗ್ಯ ವಾರ್ತೆ:

  • ತುಸು ಸಿಹಿಮಿಶ್ರ ಕಟು ರುಚಿ ಇರುವ ಕ್ಯಾರೆಟ್ ಒಂದು ಶುದ್ದೀಕಾರಕ ತರಕಾರಿ ಎಂದು ಹೆಸರು ಗಳಿಸಿದೆ.ಇದನ್ನು ಚೆನ್ನಾಗಿ ತೊಳೆದು ತಿನ್ನುವುದರಿಂದ ಬಾಯಿ ಸ್ವಚ್ಛವಾಗುದಷ್ಟೇ ಅಲ್ಲದೆ ತದನಂತರ ಜೀರ್ಣಾಂಗವ್ಯೂಹವಿಡೀ ಸ್ವಚ್ಛವಾಗುತ್ತದೆ.
  • ಕ್ಯಾರೆಟ್ ಸೇವನೆಯಿಂದ ಮಲಬದ್ದತೆಯಿಂದಲೂ ಮುಕ್ತಿ ಸಿಗುತ್ತದೆ.
  • ಕ್ಯಾರೆಟ್‍ನಲ್ಲಿ ಕ್ಷಾರೀಯ ಅಂಶಗಳು ಹೆಚ್ಚಾಗಿರುವುದರಿಂದ ಇದು ರಕ್ತವನ್ನು ಶುದ್ಧೀಕರಿಸುತ್ತದೆ.ರಕ್ತಕ್ಕೆ ಪುನಶ್ಚೇತನ ನೀಡುತ್ತದೆ.ದೇಹದಲ್ಲಿ ಕ್ಷಾರ ಮತ್ತು ಆಮ್ಲೀಯತೆಯ ಸಮಸ್ಥಿತಿಯನ್ನು ಕಾಪಾಡುವಲ್ಲಿ ನೆರವಾಗುತ್ತದೆ.
  • ಕ್ಯಾರೆಟ್‍ನಲ್ಲಿ ಸಾವಯವ ಪ್ರೋಟೀನು ಅಲ್ಲದೆ ಕಾರ್ಬೋಹೈಡ್ರೆಟ್ಸ್ಗಳು- ಪೊಟ್ಯಾಷಿಯಂ-ಕ್ಯಾಲ್ಸಿಯಂ-ರಂಜಕ-ಗಂಧಕ-ಕ್ಲೋರಿನ್-ಕಬ್ಬಿಣದಂತಹ ಖನಿಜಗಳು ಸಮೃದ್ಧವಾಗಿವೆ. ಅಲ್ಪಪ್ರಮಾಣದಲ್ಲಿ ಅಯೋಡಿನ್ ಸಹ ಇದೆ.ಈ ಪೋಷಕಾಂಷಗಳು ಕ್ಯ್ಯರೆಟ್‍ನ್ ಸಿಪ್ಪೆಯ ಬದಿಯಲ್ಲಿ ಕೇಂದ್ರೀಕೃತವಾಗಿರುತ್ತದೆ.ಆದ್ದರಿಂದ ಇವು ದೇಹಕ್ಕೆ ಲಭ್ಯವಾಗಬೇಕಾದರೆ ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆದು,ಸಿಪ್ಪೆ ತೆಗೆಯದೆಯೇ ಬಳಸುವುದು ಮುಖ್ಯ.
  • ಹಸಿ ಕ್ಯಾರೆಟ್ ತಿನ್ನುವುದರಿಂದ ಹೆಚ್ಚಿನ ಪೋಷಕಾಂಶಗಳು ಲಭ್ಯವಾಗುವುದಷ್ಟೇ ಅಲ್ಲದೆ,ದೇಹದಲ್ಲಿರುವ ಜಂತುಹುಳುಗಳ ನಿವಾರಣೆಯೂ ಆಗುತ್ತದೆ.ಕ್ಯಾರೆಟ್‍ನಲ್ಲಿ ‘ಎ’ ಮತ್ತು ‘ಸಿ’ ಜೀವಸತ್ವಗಳು ಹೆಚ್ಚಾಗಿರುತ್ತವೆ.ಅಲ್ಲದೆ ಜೀವಸತ್ವ ಬಿ೧ ಮತ್ತು ಬಿ೨ ಗಳು ಸಹ ಇರುತ್ತವೆ.ಕ್ಯಾರೆಟ್‍ನ ಸೊಪ್ಪಿನಲ್ಲಿ ಜೀವಸತ್ವ ಬಿ೨ ಸಮೃದ್ಧವಾಗಿರುತ್ತವೆ.
  • ಕ್ಯಾರೆಟ್‍ನಲ್ಲಿ ‘ಎ’ ಜೀವಸತ್ವವು ಹೆಚ್ಚಾಗಿದ್ದು, ಕ್ಷಾರೀಯ ಖನಿಜಗಳು ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.ಕಣ್ಣಿನ ತೊಂದರೆಗಳಿಂದ ಬಳಲುತ್ತಿರುವವರಿಗೆ ಇದು ಪ್ರಯೋಜನಕರ.ಇದೇ ಕಾರಣಗಳಿಂದಾಗಿ ಉಸಿರಾಟದ ಸಮಸ್ಯೆಗಳು,ಹೊಟ್ಟೆಯ ತೋದರೆಗಳು,ಸಂಧಿವಾತ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರಿಗೂ ಕ್ಯಾರೆಟ್ ಒಂದು ಔಷಧಯುಕ್ತ ಆಹರವಾಗಿದೆ.
  • ಅಸ್ತಮಾ,ಅನೀಮಿಯಾ,ಇರುಳು ಕುರುಡು,ದೇಹದಲ್ಲಿ ಕಲ್ಲುಗಳಾಗುವುದು,ಅಸಿಡೋಸಿಸ್,ರಕ್ತಮಾಲಿನ್ಯ ಮತ್ತು ಚರ್ಮದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕ್ಯಾರೆಟ್ ಒಂದು ಒಳ್ಳೆಯ ಆಹಾರವಾಗಿದೆ.
  • ಮೂತ್ರವಿಸರ್ಜನೆ ಮಾದುವಾಗ ಉರಿಯ ಅನುಭವ ಆಗುವವರಿಗೆ ಕ್ಯಾರೆಟ್ ಒಳ್ಳೆಯದು.ದೇಹದ ಚರ್ಮದ ಕಾಂತಿಯನ್ನು ಹೆಚ್ಚಿಸಲು ಕ್ಯಾರೆಟ್ ಸೇವನೆ ಮಾಡಬಹುದು. ಬಾಣಂತಿಯರು ಕ್ಯಾರೆಟ್ ರಸವನ್ನು ಸೇವಿಸುವುದರಿಂದ ಅವರ ಎದೆಹಾಲಿನ ಗುಣಮಟ್ಟವು ಚೆನ್ನಾಗಿರುತ್ತದೆ.
  • ಹಾಲಿನಲ್ಲಿ ಇರುವುದಕ್ಕಿಂತ ೨೦ ಪಟ್ಟು ಹೆಚ್ಚು ‘ಎ’ ಜೀವಸತ್ವವು ಕ್ಯಾರೆಟ್‍‍ನಲ್ಲಿರುತ್ತದೆ. ಬೆಳವಣಿಗೆ ಕುಂಠಿತವಾಗಿರುವವರಿಗೆ,ನಿಶ್ಯಕ್ತಿಯಿಂದ ಬಳಲುತ್ತಿರುವವರಿಗೆ,ಹೊಟ್ಟೆಯ ತೊಂದರೆಗಳಿರುವವರಿಗೆ,ನಿದ್ರಾಹೀನತೆಯಂತಹ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕ್ಯಾರೆಟ್ ರಸ ಪ್ರಯೋಜನಕರವಾಗಿದೆ. ಮೂಳೆ ಮತ್ತು ಹಲ್ಲಿನ ಬೆಳವಣಿಗೆಗೆ ಕ್ಯಾರೆಟ್ ಸಹಾಯ ಮಾಡುತ್ತದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here