ಆರೋಗ್ಯವಾರ್ತೆ

ಹಳ್ಳಿಮದ್ದು: ಕ್ಯಾಬೇಜ್

 
ಆರೋಗ್ಯ ವಾರ್ತೆ

ಆರೋಗ್ಯದ ದೃಷ್ಟಿಯಿಂದ ಕ್ಯಾಬೇಜ್ ಅತ್ಯಂತ ಸಿರಿವಂತ ತರಕಾರಿಯಾಗಿದೆ. ಚಳಿಗಾಲ ಮತ್ತು ಬೇಸಿಗೆಯಲ್ಲಿ ಬೆಳೆಯುವ ಕ್ಯಾಬೇಜ್ ಉತ್ತಮ. ಕ್ಯಾಬೇಜ್ ನೈಸರ್ಗಿಕವಾದ ರೋಗನಿರೋಧಕವಾಗಿದೆ. ಕ್ಯಾಬೇಜ್‌ನಲ್ಲಿ ವಿಟಮಿನ್ ಎ, ಸಿ ಯಂತಹ ಆ್ಯಂಟಿಆಕ್ಸಿಡೆಂಟ್ ಅತಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಲ್ಯೂಟಿನ್, ಜಿಯಾಕ್ಸಾಂಥೀನ್, ಐಯೊಥಿಯೊಸಿಯನೆಟ್, ಗ್ಲುಕೋಸಿನೇಟ್ಸ್ ಇವು ಹೇರಳವಾಗಿರುತ್ತವೆ.

 
ಹಸಿ ಕ್ಯಾಬೇಜ್‌ನ ರಸ ಮಾಡಿಕೊಂಡು ಕುಡಿಯುವುದು. ಕಾಲು ಲೋಟದಂತೆ ದಿನಕ್ಕೆ ನಾಲ್ಕು ಸಲ ಕುಡಿದಿರಿ ಜೀರ್ಣಾಂಗ ವೃಣ ಸಂಪೂರ್ಣ ಒಣಗಿ ನೀವು ಮೊದಲಿನಂತೆ ಆಗುತ್ತದೆ.
ಕ್ಯಾಬೇಜ್‌ ನ್ನು ಹಸಿಯಾಗಿ ಸೇವಿಸುವುದರಿಂದ ಅಲ್ಸರ್ ಗುಣವಾಗುತ್ತದೆ.
ಅಲ್ಸರ್ ಚಿಕಿತ್ಸೆಗೆ ಬಳಸುವ ಔಷಧಗಳಲ್ಲಿ ಉಪಯೋಗಿಸುವ ಜೆಫಾರ್ನೇಟ್ ಮತ್ತು ಎಲ್-ಗುಲ್ಟಾಮಿನ್ ಎನ್ನುವ ಪದಾರ್ಥಗಳು ಕ್ಯಾಬೇಜ್‌ನಲ್ಲಿ ಸಮೃದ್ಧವಾಗಿವೆ. ಹಾಗೆಯೇ ಅಲ್ಸರ್‌ಕಾರಕ ಆ್ಯಸಿಡ್ ಪ್ರತಿರೋಧಕವಾಗಿರುವ ಕಾರ್ಬನ್ ಆಕ್ಸೊಲೋನ್ ಎನ್ನುವ ರಾಸಾಯನಿಕವೂ ಇರುತ್ತದೆ. ಇವು ಆ್ಯಸಿಡ್ ದಾಳಿಯಿಂದ ಜೀರ್ಣಾಂಗ ವ್ಯೂಹವನ್ನು ರಕ್ಷಿಸುವುದಲ್ಲದೆ ಮತ್ತಷ್ಟು ಜೀವಕೋಶಗಳ ಉತ್ಪಾದನೆಗೂ ಕಾರಣವಾಗುತ್ತವೆ. ಅಲ್ಸರ್ ಉಂಟುಮಾಡುವ ಎಚ್-ಪೈಲೋರಿ ಬ್ಯಾಕ್ಟೀರಿಯಾವನ್ನೂ ಕ್ಯಾಬೇಜ್ ನಾಶಗೊಳಿಸುತ್ತದೆ.
ಮೂತ್ರಪಿ೦ಡಗಳ ವಿಚಾರದಲ್ಲ೦ತೂ ಕ್ಯಾಬೇಜುಗಳು ಚಮತ್ಕಾರವನ್ನೇ ಮಾಡುತ್ತದೆ.
ಕ್ಯಾಬೇಜಿನಲ್ಲಿ ವಿಟಮಿನ್ C ಹಾಗೂ ಗ೦ಧಕವು ಅಗಾಧಪ್ರಮಾಣದಲ್ಲಿದ್ದು ಇವು ತ್ಯಾಜ್ಯವಿಷ ಪದಾರ್ಥಗಳನ್ನು ಶರೀರದಿ೦ದ ಹೊರಹಾಕಲು ನೆರವಾಗುತ್ತವೆ
ಕ್ಯಾಬೇಜು ಒ೦ದು ಅತ್ಯುತ್ತಮವಾದ ಉರಿನಿವಾರಕವಾಗಿದೆ. ತ್ವಚೆಯ ಮೇಲಿನ ಗಾಯ ಹಾಗೂ ಬಾವುಗಳನ್ನು ಗುಣಪಡಿಸುವುದಕ್ಕಾಗಿ, ಕ್ರೀಡೆಗಳಲ್ಲಿ ತೊಡಗಿಸಿಕೊ೦ಡಿರುವಾಗ ಉ೦ಟಾಗಿರಬಹುದಾದ ಗಾಯಗಳು, ಹಾಗೂ ಕೀಲುಗಳ ಉರಿಯೂತಕ್ಕಾಗಿಯೂ ಕೂಡ ವರ್ಷಾನುವರ್ಷಗಳಿ೦ದಲೂ ಕ್ಯಾಬೇಜನ್ನು ಬಳಸಿಕೊ೦ಡು ಬರಲಾಗುತ್ತಿದೆ.
ಕೆಟ್ಟ ಕೊಲೆಸ್ಟರಾಲ್ ಕಡಿಮೆ ಮಾಡುವುದು ಮಾತ್ರವಲ್ಲ, ಕ್ಯಾನ್ಸರ್‌ನಿಂದಲೂ ನಿಮ್ಮನ್ನು ಪಾರು ಮಾಡಬಲ್ಲದು.
ಕ್ಯಾಬೇಜ್ ದೇಹದ ಎಲುಬುಗಳನ್ನು ಸದೃಢಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
 

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here