ಹಳ್ಳಿಮದ್ದು: ಕ್ಯಾಪ್ಸಕಂ

0
3162

 
ಆರೋಗ್ಯ ವಾರ್ತೆ
ದಪ್ಪ ಮೆಣಸಿನಕಾಯಿ
 ದಪ್ಪ ಮೆಣಸಿನಕಾಯಿಯನ್ನು ಆಂಗ್ಲಭಾಷೆಯಲ್ಲಿ ಕ್ಯಾಪ್ಸಿಕಂ ಎನ್ನುತ್ತಾರೆ. ಕ್ಯಾಪ್ಸಿಕಂ ಎಂಬುದು ಸೊಲನಾಸಿಯ ಎಂದು ಕರೆಯುವ ಸೊಲೇನಮ್ ಕುಟುಂಬದಲ್ಲಿ ಹೂ ಬಿಡುವ ಸಸ್ಯದ ಜಾತಿಯಾಗಿದೆ. ಇದರ ಜಾತಿಗಳು ಅಮೇರಿಕಾ ಮೂಲದ್ದಾಗಿದ್ದು, ಈಗ ವಿಶ್ವದೆಲ್ಲೆಡೆ ಬೆಳೆಸುತ್ತಾರೆ. ಕ್ಯಾಪ್ಸಿಕಂ ನ ಕೆಲವು ಜಾತಿಗಳನ್ನು ಸಂಬಾರ ಪದಾರ್ಥಗಳಾಗಿ , ತರಕಾರಿಗಳಾಗಿ ಮತ್ತು ಔಷಧಿಗಳಾಗಿ ಬಳಸಲಾಗುತ್ತದೆ. ಕ್ಯಾಪ್ಸಿಕಂ ಸಸ್ಯಗಳ ಹಣ್ಣು ಗಳನ್ನು ಅವುಗಳ ವಿಧ ಮತ್ತು ಸ್ಥಳವನ್ನು ಆಧರಿಸಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಇವುಗಳನ್ನು ಸಾಮಾನ್ಯವಾಗಿ ಚಿಲಿ ಪೆಪರ್(ದೊಣ್ಣೆ ಮೆಣಸಿನಕಾಯಿ), ಹಣ್ಣು ಮೆಣಸು ಅಥವಾ ಹಸಿ ಮೆಣಸು ಅಥವಾ ಬ್ರಿಟನ್ ನಲ್ಲಿ ಸಿಹಿ ಮೆಣಸು ಹಾಗು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಮತ್ತು ಭಾರತೀಯ ಇಂಗ್ಲೀಷ್ ನಲ್ಲಿ ಸಾಂಕೇತಿಕವಾಗಿ ಕೇವಲ ಕ್ಯಾಪ್ಸಿಕಂ ಎಂದು ಕರೆಯಲಾಗುತ್ತದೆ.
 
 
 
ಇದರ ಮೃದುವಾದ ಅತ್ಯಂತ ದೊಡ್ಡ ರೂಪವನ್ನು ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಾ ದಲ್ಲಿ ಬೆಲ್ ಪೆಪರ್ ಎಂದು ಕರೆಯಲಾಗುತ್ತದೆ . ಇವುಗಳನ್ನು ಇತರ ರಾಷ್ಟ್ರಗಳಲ್ಲಿ ಪಪ್ರೀಕ(ಕೆಂಪು ಮೆಣಸು )ಎಂದು ಕೂಡ ಕರೆಯಲಾಗುತ್ತದೆ. (ಆದರೂ ಪಪ್ರೀಕ ಅನೇಕ ಕ್ಯಾಪ್ಸಿಕಂ ಹಣ್ಣಿನಿಂದ ಮಾಡಲಾದ ಮಸಾಲೆ ಪುಡಿಯನ್ನೂ ಕೂಡ ಸೂಚಿಸಬಲ್ಲದು). ಇದರ ಜಾತಿಯ ಹೆಸರು ಗ್ರೀಕ್ ಪದವಾದ καπτο (ಕ್ಯಾಪ್ಟೊ )ನಿಂದ ಹುಟ್ಟಿಕೊಂಡಿದೆ. ಇದು “ಕಚ್ಚುವುದು” ಅಥವಾ “ನುಂಗುವುದು” ಎಂಬ ಅರ್ಥವನ್ನು ಕೊಡುತ್ತದೆ.
 
 
 
ಚಿಲಿ ಎಂಬ ಮೂಲ ಮೆಕ್ಸಿಕನ್ ಪದ ( ಮೆಕ್ಸಿಕೊದಲ್ಲಿ ಈಗ ಚಿಲೆ )ನಹೌತಲ್ ನ ಚಿಲಿ ಅಥವಾ ಕ್ಸಿಲಿ ಎಂಬ ಪದದಿಂದ ಬಂದಿದೆ. ಇದು 3000 BC ಯಲ್ಲಿ ಬೆಳೆದಿರಬಹುದಾದ ಬೃಹತ್ ಪ್ರಮಾಣದ ಕ್ಯಾಪ್ಸಿಕಂ ನ ಉಪಜಾತಿಯನ್ನು ಸೂಚಿಸುತ್ತದೆ. ಇದನ್ನು ಪ್ಯುಬ್ಲಾ ಮತ್ತು ಒಕ್ಸಾಕಾದ ಕುಂಬಾರಿಕೆ ಕೆಲಸ ನಡೆಯುವ ಸ್ಥಳಗಳಲ್ಲಿ ಕಂಡು ಬಂದಿರುವ ಅವಶೇಷಗಳ ಆಧಾರದ ಮೇಲೆ ನಿರ್ಧರಿಸಲಾಗಿದೆ.
 
 
 
ದೊಣ್ಣೆ ಮೆಣಸಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಗತ್ಯ ಖನಿಜಿ ಅಂಶಗಳಿವೆ. ಕಬ್ಬಿಣ, ತಾಮ್ರ, ಸತುವು, ಪೊಟ್ಯಾಶಿಯಂ, ಮ್ಯಾಂಗನೀಜ, ಮ್ಯಾಗ್ನೇಶಿಯಂ ಮತ್ತು ಸೆಲೆನಿಯಂ ಇವುಗಳಲ್ಲಿ ಮುಖ್ಯವಾದುವುಗಳು. ಮ್ಯಾಂಗನೀಸ್ ನ್ನು ನಮ್ಮ ಶರೀರವು ಆ್ಯಂಟಿಆಕ್ಸಿಂಡಂಟ್ ಎಂಝೈಮ್ ಆಗಿ ಬಳಸಿಕೊಳ್ಳುತ್ತದೆ. ಸೆಲೆನಿಯಂ ಕೂಡ ಇದೇ ಪಾತ್ರವನ್ನು ನಿರ್ವಹಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಎ ಸಮೃದ್ಧವಾಗಿದೆ.
ಕ್ಯಾಪ್ಸಿಕಂ ಹಲವಾರು ರೋಗ ನಿರೋಧಕ ಮತ್ತು ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಹಸಿಮೆಣಸಿನಲ್ಲಿರುವ ಲೈಕೋಪೀನ್ ದೊಣ್ಣೆ ಮೆಣಸಿನಲ್ಲಿಯೂ (ದಪ್ಪ ಮೆಣಸಿನಕಾಯಿ, ದೊಡ್ಡ ಮೆಣಸಿನಕಾಯಿ ಅಥವಾ ಕ್ಯಾಪ್ಸಿಕಂ) ಇದೆ. ಇದರೊಂದಿಗೆ ಫೋಲಿಕ್ ಆಮ್ಲ ಸಹಾ ಇದರಲ್ಲಿದೆ.
ಕಣ್ಣಿನ ಅಕ್ಷಿಪಟಲವನ್ನು ಕಾಪಾಡುವಲ್ಲಿ ದಪ್ಪ ಮೆಣಸು ಪ್ರಮುಖ ಪಾತ್ರ ವಹಿಸುತ್ತದೆ. ದಿನಕ್ಕೆ ಒಂದು ಬಾರಿಯಾದರೂ, ಇಲ್ಲವೇ ವಾರಕ್ಕೆ ಎರಡು ಬಾರಿಯಾದರೂ ದಪ್ಪ ಮೆಣಸಿನಕಾಯಿಯನ್ನು ಸೇವಿಸುವುದರಿಂದ ಕಣ್ಣಿನ ಅಂದವನ್ನು ಹೆಚ್ಚಿಸಿಕೊಳ್ಳಬಹುದು.
ಕೆಲವು ಸಂಶೋಧನೆಗಳ ಪ್ರಕಾರ ಇವೆರಡೂ ಅಂಶಗಳು ದೇಹದ ಪ್ರಮುಖ ಅಂಗಗಳಾದ ಮೂತ್ರಕೋಶ, ಕರುಳು ಮತ್ತು ಮೇದೋಜೀರಕ ಗ್ರಂಥಿಗೆ ಆವರಿಸುವ ಕ್ಯಾನ್ಸರ್ ಅನ್ನು ತಡೆಗಟ್ಟಲು ನೆರವಾಗುತ್ತದೆ.

LEAVE A REPLY

Please enter your comment!
Please enter your name here