ಆರೋಗ್ಯವಾರ್ತೆ

ಹಳ್ಳಿಮದ್ದು: ಆಲೂಗಡ್ಡೆ

ಆರೋಗ್ಯ ವಾರ್ತೆ
ಆಲೂಗಡ್ಡೆಯು ಸೊಲ್ಯಾನೇಸೀ ಕುಟುಂಬದ ಬಹುವಾರ್ಷಿಕ ಸಲೇನಮ್ ಟ್ಯೂಬರೋಸಮ್‌ನ ಒಂದು ಪಿಷ್ಠವುಳ್ಳ, ಗೆಡ್ಡೆ ಬೆಳೆ. ಆಲೂಗಡ್ಡೆ ಶಬ್ದ ಆ ಸಸ್ಯವನ್ನೂ ನಿರ್ದೇಶಿಸಬಹುದು. ಆಂಡೀಸ್ ‌ನ ಪ್ರದೇಶದಲ್ಲಿ, ಕೆಲವು ಇತರ ನಿಕಟವಾಗಿ ಸಂಬಂಧಿತ ಸಾಗುವಳಿ ಮಾಡಲಾದ ಆಲೂಗಡ್ಡೆ ಜಾತಿಗಳಿವೆ.
 
ಆಲೂಗಡ್ಡೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್, ರಂಜಕ ಗಮನಾರ್ಹ ಪ್ರಮಾಣದಲ್ಲಿ ಕಂಡು ಬರುತ್ತವೆ.
 
ಆಲೂಗಡ್ಡೆ  ಪೋಷಕಾಂಶಗಳಲ್ಲದೆ ಅವಶ್ಯಕ ಅಮೈನೋ ಆಮ್ಲಗಳು ಕೂಡ ಇರುವುದರಿಂದ ರುಚಿ ಹಿತರಕವಾಗಿದ್ದು ಎಲ್ಲಾ ತಿಂಡಿತಿನಿಸುಗಳಲ್ಲಿ ಬಳಸಬಹುದಾದ, ಸುಲಭವಾಗಿ ದೊರೆಯುವ, ಪ್ರಪಂಚದಾದ್ಯಂತ ಬಳಕೆಯಲ್ಲಿರುವ ಗೆಡ್ಡೆ ತರಕಾರಿ. ಆಲೂಗಡ್ಡೆಯನ್ನು ೩ ಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದು,ಮೇಲ್ಭಾಗದ ಸಿಪ್ಪೆ,ಎರಡನೆಯದು,ಸಿಪ್ಪೆಯ ಮೇಲ್ಬಾಗದಲ್ಲಿರುವ ತೆಳುವಾದ ಪೊರೆ,ಮೂರನೆಯದು, ಒಳ ಪಿಷ್ಟ ಭಾಗ. ಮೊದಲನೆಯ ಭಾಗದಲ್ಲಿ ಖನಿಜಾಂಶ ಮತ್ತು ಜೀವಸತ್ವಗಳಿರುತ್ತವೆ. ಎರಡನೆಯ ಪದರದಲ್ಲಿ ಸಸಾರಜನಕ ಮತ್ತು ವರ್ಣದ್ರವ್ಯ ಇರುತ್ತವೆ. ಈ ವರ್ಣದ್ರವ್ಯ ನಾವು ಆಲೂಗಡ್ಡೆಯನ್ನು ಕತ್ತರಿಸಿದಾಗ ಗಾಳಿಯ ಸಂಪರ್ಕಕ್ಕೆ ಬಂದು ಆಲೂಗಡ್ಡೆಯ ಬಣ್ಣವನ್ನು ಬದಲಾಯಿಸುತ್ತದೆ. ಮೂರನೇಯ ಭಾಗವು ಪಿಷ್ಟ ಮತ್ತು ನೀರಿನಿಂದ ಕೂಡಿರುತ್ತದೆ. ಆದುದರಿಂದಲೇ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆಯುದರಿಂದ ಅಥವಾ ತೊಳೆಯುದರಿಂದ ಪೋಷಕಾಂಶಗಳು ನಷ್ಟವಾಗಿ ಕೇವಲ ಪಿಷ್ಟ ಪದಾರ್ಥ ಮಾತ್ರ ಉಳಿಯುತ್ತದೆ.
ಆಲೂಗಡ್ಡೆ ರಸ ತಲೆನೋವನ್ನು ಕೆಲವೇ ಕ್ಷಣಗಳಲ್ಲಿ ದೂರ ಮಾಡಿ ನೆಮ್ಮದಿ ನೀಡುತ್ತದೆ.
 
ಸೌಂದರ್ಯದಲ್ಲಿ ಆಲೂಗಡ್ಡೆ ಪಾತ್ರ:
ಹೊಳೆಯುವ ಚರ್ಮ ಪಡೆಯಲು ಆಲೂಗಡ್ಡೆ ಅತೀ ಮುಖ್ಯ. ಆಲೂಗಡ್ಡೆಯನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮ ಹೊಳಪು ಪಡೆಯುತ್ತದೆ.
ಮುಖ ಸುಕ್ಕುಗಟ್ಟುವುದನ್ನು ಆಲೂಗಡ್ಡೆ ತಡೆಯುತ್ತದೆ. ಸುಕ್ಕು ತಡೆಯುವ ಹಾಗೂ ಚರ್ಮವನ್ನು ಮೃದುಗೊಳಿಸುವ ಗುಣಗಳು ಇದರಲ್ಲಿದೆ.
ಕಣ್ಣುಗಳ ಕೆಳಗಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ಆಲೂಗಡ್ಡೆ ಉತ್ತಮ ಔಷಧಿ. ಆಲೂಗಡ್ಡೆಯ ರಸವನ್ನು ಕಣ್ಣಿನ ಕೆಳಗೆ ಹಚ್ಚಿ, ಸ್ವಲ್ಪ ಸಮಯ ಬಿಟ್ಟು ತೊಳೆಯಿರಿ.
 
 

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here