ಹಳ್ಳಿಮದ್ದು: ಆರ್ಟಿಚೋಕ್

0
2718

 
ಆರೋಗ್ಯ ವಾರ್ತೆ
ಆಸ್ಟರೇಸೀ (ಕಂಪಾಸಿಟೀ) ಕುಟುಂಬಕ್ಕೆ ಸೇರಿದ ಸೈನಾರ ಸ್ಕಾಲಿಮಸ್ ಎಂಬುದು. ಇದರ ಮೂಲಸ್ಥಳ ಏಷ್ಯಖಂಡ. ಕಾಲ ಕ್ರಮದಲ್ಲಿ ಇದು ಬೇರೆ ಬೇರೆ ದೇಶಗಳಿಗೆ ಹರಡಿದೆ. ಇಟಲಿ, ಫ್ರಾನ್ಸ್, ಇಂಗ್ಲೆಂಡ್ ಮತ್ತು ಅಮೆರಿಕ ದೇಶಗಳಲ್ಲೂ ಇದನ್ನು ಸಾಗುವಳಿ ಮಾಡುವರು. ಇದರ ಗೋಳಾಕಾರದ ಹೂಗೊಂಚಲನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ಎಳಸಾದ ಹೂಗೊಂಚಲನ್ನು ಹಸಿ ತರಕಾರಿಯಾಗಿ, ಇಲ್ಲವೆ ಬೇಯಿಸಿ ಅಥವಾ ಕರಿದು ಆಹಾರವಾಗಿ ಬಳಸುವರು. ಇದರಂ ತೆಯೇ3 ಇರುವ ಇನ್ನೊಂದು. ಕಾರಡೂನ್ಂ ಎಂಬುದು. ಇದು ಗುಂಡು ಆರ್ಟಿಚೋಕ್ ಗಿಡದ ಸಮೀಪ ಬಂಧು. ಆದರೆ ಇದರ ಬುಡ ಮತ್ತು ಎಲೆತೊಟ್ಟುಗಳನ್ನು ಮಾತ್ರ ತರಕಾರಿಯಾಗಿ ಉಪಯೋಗಿಸುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ.
 
ಇದರಲ್ಲಿ ಕಬ್ಬಿಣ, ಮೆಗ್ನೀಶಿಯಂ, ಆಯೋಡಿನ್, ಕ್ಯಾಲ್ಸಿಯಂ, ವಿಟಮಿನ್ ಎ, ಡಿ, ಬಿ-12, ಸಿ, ಬಿ-6  ಮತ್ತಿತರ ಖನಿಜ ಪೌಷ್ಟಿಕಾಂಶಗಳು ಹೆಚ್ಚು ಪ್ರಮಾಣದಲ್ಲಿವೆ.
 
ಇದರ ಗಡ್ಡೆಗಳಲ್ಲಿ ಇನ್ಯೂಲಿನ್ ಎಂಬ ಪಿಷ್ಟಪದಾರ್ಥ ಇದೆ. ಗಡ್ಡೆಗಳನ್ನು ಬೇಯಿಸಿ ತಿನ್ನುವುದುಂಟು. ಇದು ದನಕರುಗಳಿಗೆ ಒಳ್ಳೆಯ ಮೇವು.
 
 
 

LEAVE A REPLY

Please enter your comment!
Please enter your name here