ಹಳಿ ತಪ್ಪಿದ ರಾಣಿಖೇತ್ ಎಕ್ಸ್ ಪ್ರೆಸ್ ಬೋಗಿಗಳು

0
326

ರಾಷ್ಟ್ರೀಯ ಪ್ರತಿನಿಧಿ ವರದಿ
ರಾಜಸ್ಥಾನದಲ್ಲಿ ರಾಣಿಖೇತ್ ಎಕ್ಸ್ ಪ್ರೆಸ್ ನ 10 ಬೋಗಿಗಳು ಹಳಿ ತಪ್ಪಿವೆ. ಥಯತ್ ಹಮೀರಾ- ಜೈಸಲ್ಮೇರ್ ನಡುವೆ ಸಂಚರಿಸುತ್ತಿದ್ದ ವೇಳೆ ರೈಲಿನ 10 ಬೋಗಿಗಳು ರಾತ್ರಿ 11:16 ರ ವೇಳೆಗೆ ಹಳಿ ತಪ್ಪಿವೆ ಎಂದು ತಿಳಿದುಬಂದಿದೆ.
 
 
 
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಕೆಲವರಿಗೆ ಗಾಯಗಳಾಗಿವೆ ಎಂದು ವಾಯುವ್ಯ ರೈಲ್ವೆ ಇಲಾಖೆಯ ಮೂಲಗಳು ತಿಳಿಸಿದೆ. ವಕ್ತಾರರಾದ ತರುಣ್ ಜೈನ್ ಹೇಳಿದ್ದಾರೆ. ರೈಲಿನ ಬೋಗಿಗಳು ಹಳಿ ತಪ್ಪಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ವಿಶೇಷ ರೈಲಿನ ಮೂಲಕ ಪ್ರಯಾಣ ಮುಂದುವರಿಸಲಾಗಿದೆ.

LEAVE A REPLY

Please enter your comment!
Please enter your name here